ಬೆಳಗಾವಿ-೧೪:ಯೋಜನಾ ಕಚೇರಿ ವ್ಯಾಪ್ತಿಯ ದೇಸೂರ್ ಗ್ರಾಮದ ಮಾವುಲಿ ಜ್ಞಾನ ವಿಕಾಸ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷರು ಲಷ್ಮಿ ಶಿವಾಜಿ ಪಾಟೀಲ್ ಹಾಗೂ ಉಪಾಧ್ಯಕ್ಷರು ಕಾಶವ್ವ ವೈಜು ಕಾಂಬಳೆ ಅವರ ಅಧ್ಯಕ್ಷತೆ ಹಾಗೂ ಉಪಾಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಮಾನ್ಯ ಯೋಜನಾಧಿಕಾರಿಗಳು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಜ್ಞಾನ ವಿಕಾಸ ಕಾರ್ಯಕ್ರಮಗಳ ಮೂಲಕ ಅನೇಕ ಮಾಹಿತಿ ಲಭ್ಯವಿದ್ದು ಅದರಲ್ಲಿ ಮುಖ್ಯವಾಗಿ ಆರೋಗ್ಯ ಉತ್ತಮವಾಗಿದ್ದರೆ ಏನನ್ನಾದರು ಸಾಧಿಸಬಹುದು, ಈ ತಪಾಸಣೆಯ ಮೂಲಕ ಪ್ರಯೋಜನ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಾಯಿ ದೀಪ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಾಗೂ ಬಿಬಿ ಶುಗರ್ ತಪಾಸಣೆಯನ್ನು ಆಯೋಜಿಸಿದ್ದು, 150 ಸದಸ್ಯರು ಭಾಗವಹಿಸಿದ್ದರು ,ವಿಶೇಷವಾಗಿ ಸಂಘದ ಬಡ ವಯಸ್ಸಾದ ಮತ್ತು ಕನ್ನಡಕವನ್ನು ತೆಗೆದು ಕೊಳ್ಳಲು ಆಗದೆ ಇದ್ದವರನ್ನು 6 ಸದಸ್ಯರನ್ನು ಚಾಯ್ಸ್ ಮಾಡಿ ಉಚಿತ ವಾಗಿ ಸಂಸ್ಥೆಯ ವತಿ ಇಂದ ಕನ್ನಡಕವನ್ನು ವಿತರಣೆ ಮಾಡಲಾಯಿತು.ಇದರ ಪ್ರಯೋಜನವನ್ನು ಪಡೆದುಕೊಂಡರು ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಕೇಂದ್ರ ಅಧ್ಯಕ್ಷರು ,ಅಬೀದ್ ಅಲಿ PRO ಸಾಯಿ ಆಸ್ಪತ್ರೆ,ಮೀನಾಜ್ ಶೇಕ್ ,ಟೆಕ್ನಿಶಿಯನ್ ಸಾಯಿ ಆಸ್ಪತ್ರೆ,ಆರೋಗ್ಯ ಇಲಾಖೆಯ ಸಿಬ್ಬಂದಿ ರಾಜಶ್ರೀ ಹಾಗೂ ಆಶಾಕಾರ್ಯಕರ್ತೆಯರು, ಮೇಲ್ವಿಚಾರಕರು ರಮೇಶ್ ಸಮನ್ವಯಾಧಿಕಾರಿ ಶಿಲ್ಪಾ ಸೇವಾ ಪ್ರತಿನಿಧಿ ಅಶ್ವಿನಿ ,ಸೇವಾ ಪ್ರತಿನಿಧಿ ಸ್ವಪ್ನ ಕ ಕೋಲಕಾರ, ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷರು ಗೀತಾ ಸ ಮುಂಗರವಾಡಿ ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಹಾಜರಿದ್ದರು.