ಶಾಲಾ ಮಕ್ಕಳಿಗೆ ಹಣ್ಣಿನ ಸಸಿ ವಿತರಿಸಿದ ಜಿಲ್ಲಾಧಿಕಾರಿ ನಿತೀಶ ಪಾಟೀಲ್
ಬೆಳಗಾವಿ-೦೫: ವಿಶ್ವ ಪರಿಸರ ದಿನ ಅಂಗವಾಗಿ ಜಿಲ್ಲಾ ಪಂಚಾಯತ, ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಸುವರ್ಣ ಸೌಧ ಮುಂಭಾಗದಲ್ಲಿ ಬುಧವಾರ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಷ್ಟೀಯ ಕೃಷಿ ವಿಕಾಸ ಯೋಜನೆಯಲ್ಲಿ ರೈತ ಮಹಿಳೆಯರಿಗೆ ಹಾಗೂ ಶಾಲಾ ಮಕ್ಕಳಿಗೆ ಜಿಲ್ಲಾಧಿಕಾರಿ ನಿತೀಶ ಪಾಟೀಲ್, ಅವರು ಹಣ್ಣಿನ ಸಸಿಗಳನ್ನು ವಿತರಿಸಿದರು.ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಎಸ್. ಗೊರವರ, ಬೈಲಹೊಂಗಲ ಸಾಮಾಜಿಕ ಅರಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಖೇಮಸಿಂಗ ಡಿ. ರಾಠೋಡ, ಬೆಳಗಾವಿ ಪ್ರಾದೇಶಿಕ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರುದ್ರಪ್ಪಾ ಕಬಾಡಗಿ, ಬೆಳಗಾವಿ ವಲಯ ಅರಣ್ಯ ಅಧಿಕಾರಿ ಪುರಶೊತ್ತಮ, ವಲಯ ಅರಣ್ಯ ಅಧಿಕಾರಿ ಗಿರಿಶ ಇಟಗಿ, ಸಾಮಾಜಿಕ ಅರಣ್ಯ ವಲಯ ಸಿಬ್ಬಂದಿಗಳು ಹಾಗೂ ಬಸ್ತವಾಡ ಗ್ರಾಮದ ಶಾಲಾ ವಿದ್ಯಾರ್ಥಿಗಳು ಹಾಗೂಗ್ರಾಮಸ್ಥರು ಭಾಗವಹಿಸಿದ್ದರು.