ಬೆಳಗಾವಿ-೦೬: ಜನಜೀವಾಳ ಪತ್ರಿಕೆಯ ಜಿಲ್ಲಾ ವರದಿಗಾರ ಅಶೋಕ ಮುದ್ದಣ್ಣವರ ತಂದೆ ಬಾಬು ಮುದ್ದಣ್ಣವರ (78) ಹೃದಯಾಘಾತದಿಂದ ಗುರುವಾರ ಬೆಳಿಗ್ಗೆ ನಿಧನರಾದರು.
ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದ ಹಿರಿಯರು ಹಾಗೂ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮೃತರಿಗೆ ಪತ್ರಕರ್ತ ಅಶೋಕ ಮುದ್ದಣ್ಣವರ ಸೇರಿದಂತೆ ನಾಲ್ಕು ಜನ ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು- ಬಳಗ ಇದೆ. ಮೃತರ ಅಂತ್ಯಕ್ರಿಯೆಯನ್ನು ಸ್ವಗ್ರಾಮವಾದ ಅಗಸಗಿಯಲ್ಲಿ ನೆರವೆರಿಸಲಾಗುವುದು.