ಬೈಲಹೊಂಗಲ-೦೩: ಬೈಲಹೊಂಗಲದ ಖ್ಯಾತ ಎಲಬು ಕೀಲು ತಜ್ಞ,ಚೆನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಶ್ರೀ ಚಿದಂಬರ ಚೈತನ್ಯ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಬಸವನಗರ ನಾಲ್ಕನೇ ಅಡ್ಡರಸ್ತೆಯ ನಿವಾಸಿ *ಡಾ. ಚಿದಂಬರ ದತ್ತಾತ್ರೇಯ ಕುಲಕರ್ಣ* (47) ಇಂದು ನಿಧನರಾಗಿದ್ದಾರೆ.
ಜನಾನುರಾಗಿಯಾಗಿ ನಿಸ್ವಾರ್ಥದಿಂದ ಬಡ ರೋಗಿಗಳಿಗೆ ಸೇವೆ ಸಲ್ಲಿಸಿದ್ದು.ಬೈಲಹೊಂಗಲ ನಗರಕ್ಕೆ ಪ್ರಪ್ರಥಮವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿ ರೋಗಿಗಳಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಿದ್ದರು. ಬೈಲಹೊಂಗಲದ ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ ಆಗಿ,ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾಗಿ,ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿ, ವಿಶ್ವ ಹಿಂದೂ ಪರಿಷತ್ತಿನ ಗೌರವ ಅಧ್ಯಕ್ಷರಾಗಿ,ಬಸವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಇದರ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೃತರ ಅಂತ್ಯಕ್ರಿಯೆ *ಇಂದು ಮದ್ಯಾಹ್ನ 12* ಗಂಟೆಗೆ ಬೆಳಗಾವಿ ರಸ್ತೆಯ ಪ್ರಶಾಂತಿ ಮುಕ್ತಿಧಾಮ ರುದ್ರ ಭೂಮಿಯಲ್ಲಿ ನೆರವೇರಿಸಲಾಗುವುದು. ತಂದೆ ನಿವೃತ್ತ ಉಪ ತಹಶೀಲ್ದಾರ್ ಶ್ರೀ ದತ್ತಾತ್ರೇಯ,ಪತ್ನಿ ಖ್ಯಾತ ಅರವಳಿಕೆ ತಜ್ಞ ಡಾ ರಾಜಶ್ರೀ,ಓರ್ವ ಪುತ್ರ ಆರುಷ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
(ಸಂಪರ್ಕ ಅಳಿಯ ಡಾ ಸಾಗರ್ ಕುಲಕರ್ಣಿ 9164559752).