23/12/2024
IMG-20240603-WA0000
ಹುಬ್ಬಳ್ಳಿ-೦೩: ಡಾ. ರಘು ಅಕಮಂಚಿ ಒಬ್ಬ ಭಾಗ್ಯಶಾಲಿ ವ್ಯಕ್ತಿ, ಮನೆಯಿಂದ ಸಹಕಾರವಿಲ್ಲದಿದ್ದರೆ ಸಾಮಾಜಿಕ ಕಾರ್ಯ ಮಾಡಲು ಸಾಧ್ಯವಿಲ್ಲ ಇಂದು ರಘು ಅವರ ಸಾಧನೆಗೆ ಅವರ ತಂದೆ ತಾಯಿ, ಮಡದಿ ಮತ್ತು ಮಕ್ಕಳೇ ಕಾರಣ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಶ್ರೀ ಮಂಗೇಶ ಭೇಂಡೆ  ಹೇಳಿದರು.
IMG 20240530 WA0005 -
   ನಗರದ ಬಿವಿಬಿ ಬಯೋಟೆಕ್ ಅಡಿಟೋರಿಯಂ’ನಲ್ಲಿ  ರವಿವಾರ ಹಮ್ಮಿಕೊಳ್ಳಲಾಗಿದ್ದ  ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಮತ್ತು ಅಖಿಲ ಭಾರತೀಯ ರಾಷ್ಟ್ರೀಯ ಶಿಕ್ಷಕ ಮಹಾ ಸಂಘಗಳ ವತಿಯಿಂದ 60 ವಸಂತಗಳನ್ನು ಪೂರೈಸಿ ವೃತ್ತಿಯಿಂದ ನಿವೃತ್ತಿ ಹೊಂದಿರುವ ಕೆಆರ್‌ಎಂಎಸ್‌ಎಸ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ. ರಘು ಅಕಮಂಚಿಯವರ  ನಿವೃತ್ತಿ ನಿಮಿತ್ತ   ಬಾಂಧವ್ಯ ಶಿಕ್ಷಕರ ಪರಿವಾರ ಮಿಲನ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
     ಕರ್ನಾಟಕ ಮಹಾವಿದ್ಯಾಲಯ ಶಿಕ್ಷಕ ಸಂಘಕ್ಕೆ ಹೊಸ ರೂಪವನ್ನು ಕೊಟ್ಟಂತ ವ್ಯಕ್ತಿ ಮತ್ತು ಶಿಕ್ಷಕರನ್ನು ರಾಷ್ಟ್ರಮಟ್ಟದಲ್ಲಿ ಜೋಡಿಸಿ ಶಿಕ್ಷಕರ ಅನೇಕ ಸಮಸ್ಸೆಗಳಿಗೆ ಪರಿಹಾರ ಕಲ್ಪಿಸಿಕೊಟ್ಟಂತ ವ್ಯಕ್ತಿ ರಘು ಅವರು ಎಂದರು.
ಹೊಸತನ ತರುವುದು, ಹೊಸ ವಿಚಾರಗಳನ್ನು ಕಾರ್ಯಕರ್ತರನ್ನು ತಯಾರು ಮಾಡುವುದು ಮತ್ತು ನಿರಂತರವಾಗಿ ನಡೆಯುತ್ತಿರುವ ಶಿಕ್ಷಕ ಸಂಘದ ಅಭಿವೃದ್ಧಿಕಾರ್ಯದಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.
ಸಂಘಟಕ ಎಂದರೆ ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ಮತ್ತು ಎಲ್ಲರ ಸುಖ ದುಃಖದಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿತ್ವ ಹೊಂದಿರಬೇಕು ಮತ್ತು ಅಂತಃ ವ್ಯಕ್ತಿತ್ವ ಹೊಂದಿರುವಂತವರು ಅಕಮಂಚಿಯವರು ಎಂದರು.
40 ವರ್ಷಗಳ ಕಾಲ ಒಂದು ವಿಚಾರ ಮತ್ತು ಒಂದು ಧ್ಯೇಯಕ್ಕಾಗಿ ಮತ್ತು ಆದರ್ಶ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ಸಾಮಾಜಿಕವಾಗಿ ಎಲ್ಲ ತರಹದ ನೋವು ನಲಿವುಗಳನ್ನು ಅನುಭವಿಸಿದ ವ್ಯಕ್ತಿತ್ವ ರಘು ಅಕಮಂಚಿಯವರದ್ದು ಎಂದು ಹೇಳಿದರು.
ರಘು ಅವರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರೆ ಸಂಘಟನೆಗೊಂದು ತೂಕ ಬರುತಿತ್ತು, ಮತ್ತು ಅವರನ್ನು ಪ್ರಾಚಾರ್ಯರಾಗಿಸಿಕೊಳ್ಳುವ ಪುಣ್ಯ ಆ ಕಾಲೇಜಿಗಿಲ್ಲ  ಬೇಸರಪಟ್ಟರು.
ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ, ವಿದ್ಯಾರ್ಥಿ ಪರಿಷತ್ ನಲ್ಲಿಯೇ ತುಂಬಾ ಶ್ರಮಿಸಿದಂತ ಜೀವ ಅಕಮಂಚಿಯವರದ್ದು ಎಂದರು,
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅನೇಕ ದುಂಡು ಮೇಜಿನ ಸಭೆಗಳನ್ನು ಮತ್ತು ಅದಕ್ಕೆ ಸಲಹೆ ಸೂಚನೆಗಳನ್ನು ನೀಡಿದ ವ್ಯಕ್ತಿತ್ವ ಇವರದ್ದು ಎಂದು ಸ್ಮರಿಸಿದರು.
ಅತ್ಯುತ್ತಮ ವ್ಯಕ್ತಿತ್ವ ನಿರ್ವಹಿಸಿದ ವ್ಯಕ್ತಿ ಡಾ. ರಘು ಅಕಮಂಚಿ ಅವರದ್ದು, ಅವರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರೆ ಆ ಮಹಾವಿದ್ಯಾಲಯವು ಕೂಡ ಬೆಳೀತಿತ್ತು ಎಂದು ಹೇಳಿದರು.

ಅ.ಭಾ.ವಿ.ಪ ನ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಪ್ರೊ. ಪಿ.ವಿ ಕೃಷ್ಣಭಟ್  ಅತ್ಯಂತ ತೀವ್ರವಾದ ಸಾಮಾಜಿಕ ಕಳಕಳಿ ಹೊಂದಿದಂತ ವ್ಯಕ್ತಿ ಡಾ. ರಘು ಅವರದ್ದು ಎಂದು ಹೇಳಿದರು.
ಕುಟುಂಬ, ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಹೇಗೆ ತೊಡಗಿಕೊಳ್ಳ ಬೇಕು ಎಂಬ ಆದರ್ಶ ಹೊಂದಿದವರು ಅವರು ಎಂದು ಹೇಳಿದರು.
ವಿದ್ಯಾರ್ಥಿಗಳ ಜೊತೆ ಆತ್ಮೀಯವಾಗಿ ಭಾಗಿಯಾಗುವಾದರ ಜೊತೆಗೆ ವಿದ್ಯಾರ್ಥಿಗಳಿಗೆ ಅದರ್ಷಮಯವಾಗಿ ಜೀವನ ರೂಪಿಸುವ ಕಾರ್ಯವನ್ನು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಿ ಸೇವೆ ಅಲ್ಲಿಸಿರುವುದನ್ನು ಸ್ಮರಿಸಿದರು.
ಅಧ್ಯಾಪಕ ಸಂಗಗಳು ಕೂಡ ಟ್ರೆಡ್ ಯುನಿಯನ್ ಗಲಾಗಿದ್ದಾಗ ಶಿಕ್ಷಣಕ್ಕೆ ಒಂದು ಒಳ್ಳೆ ಗುಣಾತ್ಮಕ ಕೊಡುಗೆ ನೀಡುವುದಕ್ಕಾಗಿ ಶಿಕ್ಷಕರನ್ನು ಸಮಾಜದ ಬೆಳಕಗಿಸುವ ನಿಟ್ಟಿನಲ್ಲಿ ಕೆಆರ್ ಎಂ ಎಸ್ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹಾರೈಸಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ ಮಾತನಾಡುತ್ತ, ವಿದ್ಯಾರ್ಥಿ ಸಂಘಟನೆಗಳನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಟವಂತವಾಗಿ ಕಾರ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಂತಹ ವ್ಯಕ್ತಿತ್ವ ರಘು ಅಕಮಂಚಿಯವರದು ಎಂದರು.
ರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕಟ್ಟಡ ಆಗಬೇಕೆಂದರೆ ಅಕಾಮಂಚಿಯವರ ಪತ್ರ ಬಹಳ ಇದೆ. ಮತ್ತು ಕೋವಿಡ್ ಸಂದರ್ಭ ದಲ್ಲಿ 24 ಗಂಟೆಗಳ ಕಾಲ ಸೇವೆ ಸಲ್ಲಿದ್ದನ್ನು ನಾವು ಸ್ಮರಿಸಲೇಬೇಕು ಎಂದು ಹೇಳಿದರು.
ಸಂಘದ ಹಿರಿಯರಾದ ಜಿ.ಆರ್ ಜಗದೀಶ್ ಅವರು ಮಾತನಾಡುತ್ತಾ, ಜೀವನದಲ್ಲಿ ಅನೇಕ ಸಂಘಟನೆಗಳಲ್ಲಿ ನಿಸ್ವಾರ್ಥದಿಂದ ಸೇವೆ ಸಲ್ಲಿಸಿ,  ಕಷ್ಟಕಾರ್ಪಣ್ಯಗಳನ್ನು ಮತ್ತು ಅನೇಕ ಪೆಟ್ಟುಗಳನ್ನು ತಿಂದು ಇಂದು ಸಮಾಜಮುಖಿಯಾಗಿ, ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ವ್ಯಕ್ತಿತ್ವ ಶ್ರೀ ರಾಘು ಅಕಮಂಚಿಯವರದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ, ಹಿರಿಯ ಪ್ರಚಾರಕರಾದ ಶ್ರೀಧರ್ ನಾಡಿಗೇರ, ಕೆ.ಎಲ್.ಈ. ಕುಲಪತಿಗಳಾದ ಡಾ. ಅಶೋಕ್ ಶೆಟ್ಟರ,  ಎಬಿಆರ್‌ಎಸ್‌ಎಂನ ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಜಿ ಲಕ್ಷ್ಮಣ,   ರವರು ರಘು ಅಕಾಮಂಚಿಯವರೊಂದಿಗಿನ ತಮ್ಮ  ಸಾಮಾಜಿಕ ಜೀವನವನ್ನು ವೇದಿಕೆಯಲ್ಲಿ ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ  ಕೆ.ಎಸ್‌ಎಸ್ ಸಂಸ್ಥಾಪಕ ಕಾರ್ಯದರ್ಶಿಗಳಾದ ರವಿ ದಂಡಿನ, ಡಾ. ವಿಜಯ ಸಂಕೇಶ್ವರ, ಶ್ರೀ ಶಂಕರಣ್ಣ ಮುನವಳ್ಳಿ, ಜಿ ಎನ್ ಚಿಕ್ಕಮಠ,  ಪ್ರೊ ಬಿ.ಕೆ ತುಳಸಿಮಾಲಾ, ಕವಿವಿ ಕುಲಪತಿಗಳಾದ ಡಾ. ಕೆ.ಬಿ ಗುಡಸಿ, ಶಾಸಕ ಮಹೇಶ ಟೆಂಗಿನಕಾಯಿ, ಕೆ.ಆರ್‌ಎಂ.ಎಸ್ ಗೌರವಾಧ್ಯಕ್ಷರಾದ ಶ್ರೀ ಅರುಣ ಶಹಾಪೂರಹಾಗೂ ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು ಮತ್ತು ಉನ್ಯಾಸಕ ವೃಂದ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯ ಅಧ್ಯಕ್ಷರಾದ ಡಾ. ಗುರುನಾಥ ಬಡಿಗೇರ ಪ್ರಾಸ್ತಾವಿಕ ನುಡಿ ನುಡಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಂದೀಪ ಬೂದಿಹಾಳ ಸ್ವಾಗತಿಸಿದರು. ಪ್ರಸನ್ನ ಪಂಡ್ರಿ ಪರಿಚಯಿಸಿದರು. ಡಾ. ಸಿ.ವಿ ಮರೀದೇವರಮಠ ನಿರೂಪಿಸಿದರು.

error: Content is protected !!