23/12/2024
IMG-20240602-WA0000

ಬೆಳಗಾವಿ-೦೨: 2024-25 ನೇ ಸಾಲಿನ ವಿವಿಧ ವೃತ್ತಪರ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ(ಕೆ-ಸಿಇಟಿ)ಯಲ್ಲಿ ನಗರದ ಆಕಾಶ ಶ್ರೀಶೈಲ್ ಕಂಕಣವಾಡಿ ರಾಜ್ಯಕ್ಕೆ ಎಂಟನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ.

IMG 20240530 WA0005 -ಮಂಗಳೂರಿನ ಎಕ್ಸಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿರುವ ಆಕಾಶ್, ಬೆಳಗಾವಿ ಜಿಲ್ಲೆಯ ಆಹಾರ ಮತ್ತು ನಾಗರಿಕ ಪೂರೈಕರ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ್ ಕಂಕಣವಾಡಿಯವರ ಪುತ್ರನಾಗಿದ್ದಾರೆ.

ನೀಟ್ ನಲ್ಲೂ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿರುವ ಆಕಾಶ್, ಏಮ್ಸ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಗುರಿ ಹೊಂದಿದ್ದಾರೆ.
ಈತನ ಸಾಧನೆಗೆ ಎಕ್ಸಪರ್ಟ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಮತ್ತು ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.

error: Content is protected !!