23/12/2024
Screenshot_2024_0527_004608
ಬೆಂಗಳೂರು-೨೭: ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿ ಜೆಡಿಎಸ್ ಬಿಜೆಪಿ ಪಕ್ಷಗಳ ಸಮನ್ವಯ ಸಭೆ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಎರಡೂ ಪಕ್ಷಗಳ ಪ್ರಮುಖ ನಾಯಕರು ಭಾಗಿಯಾಗಿದ್ದ ಈ ಸಭೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಶ್ರೀ ಅ.ದೇವೇಗೌಡ ಅವರನ್ನು ದೊಡ್ಡ ಅಂತರದಿಂದ ಗೆಲ್ಲಿಸಿಕೊಳ್ಳಲು ಚರ್ಚೆ ನಡೆಸಲಾಯಿತು. ವಿಧಾನಸಭೆ ಪ್ರತಿಪಕ್ಷ ನಾಯಕರಾದ ಆರ್,ಅಶೋಕ,, ಮಾಜಿ ಉಪ ಮುಖ್ಯಮಂತ್ರಿಗಳಾದ,ಅಶ್ವತ್ಥನಾರಾಯಣ,, ಮಾಜಿ ಸಚಿವರಾದ ಶ್ರೀ ಕೆ.ಗೋಪಾಲಯ್ಯ, ಶ್ರೀ ಮುನಿರತ್ನ, ಶ್ರೀ ಸಿ.ಪಿ.ಯೋಗೇಶ್ವರ್, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್,, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಟಿ.ಎ.ಶರವಣ, ಮಾಜಿ ಶಾಸಕರಾದ ಶ್ರೀ ನಿಸರ್ಗ ನಾರಾಯಣಸ್ವಾಮಿ, ಡಾ.ಶ್ರೀನಿವಾಸಮೂರ್ತಿ, ಶ್ರೀ ಎ.ಮಂಜುನಾಥ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಶ್ರೀ ಹೆಚ್.ಎಂ.ರಮೇಶ್ ಗೌಡ, ರಾಜ್ಯ ಮಹಿಳಾ ಜೆಡಿಎಸ್ ಅಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡ, ಹಿರಿಯ ನಾಯಕರಾದ ಶ್ರೀ ನಾರಾಯಣ ಸ್ವಾಮಿ (ರಾಜರಾಜೇಶ್ವರಿ ನಗರ), ಶ್ರೀ ಅಂದಾನಯ್ಯ, ಶ್ರೀ ಗಂಗಾಧರ ಮೂರ್ತಿ, ಶ್ರೀ ಆರ್.ಪ್ರಕಾಶ್, ಶ್ರೀ ರಾಜಣ್ಣ, ಶ್ರೀ ತಿಮ್ಮೇಗೌಡ, ಶ್ರೀ ಜವರಾಯಿ ಗೌಡ, ಶ್ರೀ ಬಾಗೇಗೌಡ, ಶ್ರೀಮತಿ ಶೈಲಜಾ ರಾವ್, ಶ್ರೀ ರೋಷನ್ ಅಬ್ಬಾಸ್ ಸೇರಿ ಎರಡೂ ಪಕ್ಷಗಳ ಅನೇಕ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.
error: Content is protected !!