ಬೆಳಗಾವಿ-೧೨:ಬೆಳಗಾವಿಯ ಅರಿಹಂತ್ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ. ದಾದಿಯರ ದಿನಾಚರಣೆಗೆ ಶ್ರೀಮತಿ ಮೀನಾಕ್ಸಿತಾಯಿ ರಾವಸಾಹೇಬ ಪಾಟೀಲ್ ಅವರೊಂದಿಗೆ ಡಾ.ಸೋನಾಲಿ ಸರ್ನೋಬತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಯಿತು. ಖ್ಯಾತ ಶಸ್ತ್ರಚಿಕಿತ್ಸಕ ಮತ್ತು ಆಸ್ಪತ್ರೆಯ ಎಂಡಿ ಡಾ ಮಹಾದೇವ ದೀಕ್ಷಿತ್ ಮತ್ತು ಡಾ ಮಾಧುರಿ ದೀಕ್ಷಿತ್ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು! ಸೋನಾಲಿ ಅವರು ಆರೋಗ್ಯ ರಕ್ಷಣೆಯಲ್ಲಿ ಶುಶ್ರೂಷಾ ಸಿಬ್ಬಂದಿಯ ಮಹತ್ವದ ಕುರಿತು ಮಾತನಾಡಿದರು.
ಈ ಸಂದರ್ಭ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.