ನೇಸರಗಿ-೧೨:ಶ್ರೀ ರೇವಣಸಿದ್ದೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ನೇಸರಗಿ – ಮಲ್ಲಾಪುರ ಇದರ 2023-24 ಸಾಲಿಗೆ ನಡೆದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಕುಮಾರಿ ದಾನೇಶ್ವರಿ ಶಿತಲಕುಮಾರ ಕಾಡಣ್ಣವರ 595 ಅಂಕ ಪಡೆದು ಶೇಕಡ 95.5% ಮಾಡಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಕುಮಾರಿ ಸಹನಾ ಮಲ್ಲಿಕಾರ್ಜುನ ಮಾಳನ್ನವರ
584 ಅಂಕ ಪಡೆದು ಶೇಕಡ 93.44 ಗಳಿಸಿ ದ್ವಿತೀಯ ಸ್ಥಾನ ಪಡೆದರೆ,ಕುಮಾರಿ ಐಶ್ವರ್ಯ ದುಂಡಪ್ಪ ತುಬಾಕದ
584 ಅಂಕ ಪಡೆದು ಶೇಕಡ 93.44 ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಕುಮಾರಿ ಆರಾಧ್ಯ ನಿಂಗಪ್ಪ ಜನಗೊನ್ನ
578 ಅಂಕ ಪಡೆದು ಶೇಕಡ 92.48% ಗಳಿಸಿ ತೃತೀಯ ಸ್ಥಾನ ಪಡೆದಿದ್ದಾಳೆ. ಒಟ್ಟು 77.27% ಫಲಿತಾಂಶ ಬಂದಿದ್ದು ಇವರ ಸಾಧನೆಗೆ ಶ್ರೀ ಗಾಳೇಶ್ವರ್ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು, ಮುಕ್ಯೋಪಾಧ್ಯಾಯರಾದ ಶರಣು ಎಂ ಎಸ್, ಆಡಳಿತ ಮಂಡಳಿ, ಶಿಕ್ಷಕರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.