23/12/2024
IMG-20240503-WA0007

ಬೆಳಗಾವಿ-೦೩: ಬೆಳಗಾವಿ ವಿಮಾನ ನಿಲ್ದಾಣ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ. ಇದರಿಂದ ಹೆಚ್ಚು ಆರ್ಥಿಕ ಚಟುವಟಿಕೆಗಳು ಆರಂಭ ಆಗುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆದರೆ ರೈತರು ಬೆಳೆಯುವ ಬೆಳೆಗಳು ಬೇರೆ ಬೇರೆ ದೇಶಗಳಿಗೆ ರಪ್ತು ಮಾಡಲು ಅವಕಾಶ ಸಿಗಲಿದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ತಿಳಿಸಿದ್ದಾರೆ.‌

ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿ ಜಿಲ್ಲೆಯ ಮಡಿವಾಳ ಸಮಾಜದ ಜೊತೆ ಸಮಾಲೋಚನೆ ಮಾಡಿ ಮತಯಾಚನೆ ಮಾಡಲಾಯಿತು. ಈ ವೇಳೆ ಮಾತನಾಡದ ಜಗದೀಶ್ ಶೆಟ್ಟರ್ ಅವರು, ಮಂಗಳ ಅಂಗಡಿಯವರು ಕೂಡಾ ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ‌. ಹವಾಯಿ ಚಪ್ಪಲಿ ಹಾಕುಕೊಳ್ಳುವ ಸಾಮಾನ್ಯ ವ್ಯಕ್ತಿ ಕೂಡಾ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬ ಆಸೆ ನರೇಂದ್ರ ಮೋದಿಯವರಿಗೆ ಇದೆ. ವಿಮಾನದ ಮೂಲಕ ಅತೀ ಕಡಿಮೆ ದರದಲ್ಲಿ ಬೇರೆಬೇರೆ ಕಡೆ ಪ್ರಯಾಣ ಮಾಡುವ ಅವಕಾಶ ನರೇಂದ್ರ ಮೋದಿಯವರು ಕಲ್ಪಿಸಿದ್ದಾರೆ. ವಿಮಾನದ ಮೂಲಕ ಪ್ರಯಾಣ ಮಾಡುವುದರಿಂದ ಬಹಳಷ್ಟು ಸಮಯದ ಉಳಿತಾಯ ಆಗಲಿದೆ‌‌ ಎಂದು ತಿಳಿಸಿದರು.‌

ಮೋದಿಯವರ ಅವಶ್ಯಕತೆ ದೇಶದಕ್ಕೆ ತುಂಬಾ ಇದೆ. ಮೋದಿಯವರ ಪ್ರತಿನಿಧಿಯಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ.‌ ಬೆಳಗಾವಿ ಜೊತೆ 30 ವರ್ಷದ ನಂಟು ನನಗೆ ಇದೆ. ಸಿಎಂ ಆಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಲು ನಾನೇ ಅಡಿಪಾಯ ಹಾಕಿದ್ದೇನೆ. ಈ ಭಾಗದಿಂದ ದಿ. ಸುರೇಶ್ ಅಂಗಡಿಯವರು ನಾಲ್ಕು ಬಾರಿ ಜಯ ಗಳಿಸಿದ್ದಾರೆ. ರೈಲ್ವೆ ಖಾತೆ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲಾ ಸಮುದಾಯದ ಯುವಕರಿಗೆ ಸ್ಟಾರ್ಟಪ್ ಮೂಲಕ ಉದ್ಯೋಗ ಮಾಡಲು ಅವಕಾಶ ಕಲ್ಪಿಸಲಾಗಿದೆ‌. ಲೋಕಸಭಾ ಸದಸ್ಯ ಆದ ಮೇಲೆ ಎಲ್ಲಾ ಸಮುದಾಯದ ಹಿತ ಕಾಪಡುವ ಕೆಲಸ ಮಾಡುತ್ತೇನೆ. ಸರ್ಕಾರದ ಎಲ್ಲಾ ಯೋಜನೆಗಳು ಜನರಿಗೆ ತಲುಪಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.‌

ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಬಾಳಪ್ಪ ಮಡಿವಾಳ, ರಾಜಕುಮಾರ ಮಡಿವಾಳ, ಹನುಮಂತ ಮಡಿವಾಳ, ದುಂಡಪ್ಪ ಮಡಿವಾಳ, ಪುಂಡಲೀಕ ಮಡಿವಾಳ, ಬಸವರಾಜ ಮಡಿವಾಳ, ಅಭಿಮನ್ಯು ಮಡಿವಾಳ, ಶಿವು ಮಡಿವಾಳ ಹಾಗೂ ಸಮಾಜದ ಬಂಧುಗಳು ಹಾಜರಿದ್ದರು.

error: Content is protected !!