23/12/2024
IMG-20240430-WA0001

ಬೆಳಗಾವಿ-೩೦:ಭಾರತ ದೇಶವನ್ನು ಸೂಪರ್ ಪಾವರ್ ಮಾಡಲು ಹಾಗೂ ದೇಶದ ಸುರಕ್ಷತೆಗೆ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗುವುದು ಬಹಳ ಮುಖ್ಯ ಇದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.

ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಯ ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೆಜ್‌ಮೆಂಟ್‌ ಕಾಲೇಜಿನ ಸಭಾ ಭವನದಲ್ಲಿ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ‌ನಡೆಸಿ, ಮಾತನಾಡಿದ ಅವರು, ಒಂದು ದೇಶದ ಪ್ರಗತಿಗೆ ಆ ದೇಶದ ಆರ್ಥಿಕತೆ ಬಹಳ ಮುಖ್ಯ ಆಗುತ್ತದೆ‌. ಅಮೇರಿಕಾ ಸೇರಿದಂತೆ ಬೇರೆ ಬೇರೆ ದೇಶಗಳು ಆರ್ಥಿಕ ಪ್ರಗತಿ ಹೊಂದಿದರಿಂದ ಆ ದೇಶಗಳಿಗೆ ಉನ್ನತ ‌ಸ್ಥಾನ ಇದೆ. ಪ್ರಧಾನಿ ಮೋದಿಯವರು ದೇಶದಲ್ಲಿ ಉತ್ತಮವಾದ ಆರ್ಥಿಕ ನೀತಿ ಜಾರಿಗೆ ತಂದು ದೇಶವನ್ನು ಅಭಿವೃದ್ಧಿ ಮಾಡಿದರು. ಅಕ್ಕಪಕ್ಕದ ರಾಷ್ಟ್ರಗಳು ಆರ್ಥಿಕವಾಗಿ ದಿವಾಳಿ ಆಗಿದೆ. ಆದರೆ ಭಾರತ ಆರ್ಥಿಕವಾಗಿ ಬೆಳೆದಿದೆ ಎಂದರೆ ಅದಕ್ಕೆ ಮೋದಿಯವರು ಕಾರಣ ಎಂದು ತಿಳಿಸಿದರು.

ಮೋದಿಯವರು 2014 ರಲ್ಲಿ ಪ್ರಧಾನಿ ಆದಾಗ ಭಾರತದ ಆರ್ಥಿಕವಾಗಿ 14 ನೆ ಸ್ಥಾನದಲ್ಲಿ ಇತ್ತು ಆದರೆ ಕೇವಲ 10 ವರ್ಷದಲ್ಲಿ ದೇಶದ ಆರ್ಥಿಕತೆ 5 ನೇ ಸ್ಥಾನಕ್ಕೆ ತಂದಿದ್ದಾರೆ. ಮೋದಿಯವರು ಮತ್ತೆ ಪ್ರಧಾನಿಯಾದರೆ ದೇಶದ ಆರ್ಥಿಕತೆ 3 ನೆ ಸ್ಥಾನಕ್ಕೆ ಬರಲಿದೆ. ಇನ್ನೂ 10-15 ವರ್ಷದಲ್ಲಿ ದೇಶ ಸೂಪರ್ ಪಾವರ್ ಆಗಿ ಆರ್ಥಿಕವಾಗಿ ನಂಬರ್ 1 ಆಗಲಿದೆ.‌ ಹಾಗಾಗಿ ಮೋದಿಯವರು ದೇಶದ ಸುರಕ್ಷತೆಗೆ ಬಹಳ ಅವಶ್ಯಕತೆ ಇದೆ ಎಂದು ಹೇಳಿದರು‌.

ಈ ಸಂದರ್ಭದಲ್ಲಿ ಸಂಸದೆ ಮಂಗಲ ಸುರೇಶ ಅಂಗಡಿ, ಮಾಜಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಪ್ರಮುಖರಾದ ಶಿಲ್ಪಾ ಶೆಟ್ಟರ್, ಶ್ರದ್ಧಾ ಶೆಟ್ಟರ್, ರಾಜು ಜೋಶಿ, ಡಾ. ಕಿರಣ ಪೋತದಾರ, ಸಂಗೀತಾ ದೇಸಾಯಿ, ಬಿ.ಎಂ. ಪಾಟೀಲ್, ಡಾ. ಧನಶ್ರೀ ಕುಲಕರ್ಣಿ, ಪ್ರಿಯಾಂಕಾ ಪೂಜಾರಿ, ಡಾ. ಕೃಷ್ಣಕುಮಾರ ಕಣ್ಣೈ, ಸಾಗರ ಬಿರ್ಜೆ, ರವಿರಾಜ ಚೌಗಲಾ, ವಿಶಾಲ ಪಾಟೀಲ, ಪ್ರಸಾದ, ಪಂಚಾಕ್ಷರಿಮಠ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!