12/04/2025
IMG-20240430-WA0002

IMG 20240430 WA0003 - IMG 20240430 WA0003

ಬೆಳಗಾವಿ-೩೦: ಪ್ರಜ್ವಲ್ ರೇವಣ್ಣ ಅಶ್ಲೀಲ್ ವಿಡಿಯೋ ಆರು ತಿಂಗಳ ಮೊದಲೇ ಸುಳಿದಾಡಿದರು ಮೈತ್ರಿಕೂಟದಿಂದ ಟಿಕೆಟ್‌ ಯಾಕೆ ನೀಡಿದರು. ಈ ಪ್ರಕಣದ ಬಗ್ಗೆ ಪ್ರಧಾನಿ ಮೋದಿ, ಶಾ ಮೌನಕ್ಕೆ ಶರಣಾಗಿರುವುದು ಯಾಕೆ ? ಪ್ರಜ್ವಲ್ ಗೆ ಬೆನ್ನಿಗೆ ನಿಂತವರು ಯಾರು.. ? ಎಂದು ಎಐಸಿಸಿ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರೆ ಸುಪ್ರೀಯಾ‌ ಶ್ರೀನೆಟ್ ಮೈತ್ರಿಕೂಟಕ್ಕೆ ಪ್ರಶ್ನೆಗಳ ಸುರಿಮಳೆ ಗೈದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಹಾಗೂ ಪ್ರಧಾನಿ ಮೋದಿಯವರಿಗೆ ಪ್ರಜ್ವಲ್ ರೇವಣ್ಣ ಮಾಡಿರುವ ಕೃತ್ಯದ ಬಗ್ಗೆ ಮಾಹಿತಿ ಇತ್ತು ಆದರೂ, ಹಾಸನ ಟಿಕೆಟ್‌ ನೀಡಿ ಮೈಸೂರಿನಲ್ಲಿ ಬಿಜೆಪಿ ಸಮಾವೇಶದಲ್ಲಿ ಪ್ರಜ್ವಲ್ ರೇವಣ್ಣನ ಬೆನ್ನು ತಟ್ಟಿ ಮತ ನೀಡುವಂತೆ ಯಾವ ಮುಖ ಇಟ್ಟುಕೊಂಡು ಮತಯಾಚನೆ ಮಾಡಿದರು ಎಂದು ಪ್ರಶ್ನಿಸಿದರು.

ಮಹಿಳೆಯರ ಸ್ವಾಭಿಮಾನ ಮತ್ತು ಅವರ ಸುರಕ್ಷತೆ ಅಪಾಯದಲ್ಲಿದೆ. ಸಾವಿರಾರು ಮಹಿಳೆಯರ ಮೇಲೆ‌ ದೌರ್ಜನ್ಯ ನಡೆದಿದೆ ಪ್ರಜ್ವಲ್ ಪ್ರಧಾನಿ ಮೋದಿಯರು ಚಕಾರವೆತ್ತಲಿಲ್ಲ, ಅವರ ಬೆನ್ನಿಗೆ ನಿಂತಿದ್ದಾದರೂ ಯಾಕೆ ಎಂದು ಆಕ್ರೋಶ ಹೊರಹಾಕಿದರು. ಪ್ರಜ್ವಲ್ ರೇವಣ್ಣನ ಪ್ರಕರಣದ ಕುರಿತು ಯಾವ ಕೇಂದ್ರ ಸಚಿವರು ಮಾತನಾಡದೆ ಇರುವುದು ವಿಪರ್ಯಾಸದ ಸಂಗತಿ ಎಂದರು.

ರಾಕ್ಷಸ ಪ್ರವೃತ್ತಿ ಇರುವ ಜೆಡಿಎಸ್‌ ಪಕ್ಷದ ಜತೆ ಸಮ್ಮಿಲನ ಮಾಡಿಕೊಂಡಿರುವ ಮೋದಿ ಅವರು ಇದಕ್ಕೆ ಉತ್ತರ ನೀಡಬೇಕಿದೆ. ಪ್ರಧಾನಿ ಮೋದಿಯವರ ಅಭಿವೃದ್ಧಿ ಬಗ್ಗೆ ಹೊಗಳಿಕೊಳ್ಳುತ್ತಾರೆ ಆದರೆ, ಸಾವಿರಾರು ಮಹಿಳೆಯರ ಮಾನ ಹಾನಿಯಾಗಿದೆ. ಇದೇನಾ ಬಿಜೆಪಿ ಬದ್ಧತೆ ಎಂದು ಚಾಟಿ ಬೀಸಿದರು.

ದೇಶದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲದಾಗಿದೆ. ಜೆಡಿಎಸ್‌ ಜತೆ ಕೈ ಜೋಡಿಸಿದ ಬಿಜೆಪಿಗರಿಗೆ ಇರುವ ಕೈಯನ್ನು ಹೇಗೆ ಇಟ್ಟಕೊಳ್ಳಬೇಕು ಎಂದು ಅರಿವು ಬೇಡವಾ..! ಮಹಿಳೆಯರ ಬಗ್ಗೆ ಅಪಾರ ಇದೆ ಬೃಹತ್ತ ಭಾಷಣ ಬಿಗಿಯುವ ಮೋದಿಯರಿಗೆ ಮೈತ್ರಿಕೊಟದ ಕೈಯನ್ನು ಹೇಗೆ ಭದ್ರತೆ ಇಟ್ಟಕೊಳ್ಳಬೇಕು ಎಂದು ಗೋತ್ತಿಲ್ಲವಾ ನಿಮ್ಮ ಮೈತ್ರಿಕೊಟದ ಸಂಸದ “ಕೈ ” ಸಾವಿರಾರು ಮಹಿಳೆ ಮಾನ ತೆಗೆದಿದೆ ಇದಕ್ಕೇನು ಹೇಳುತ್ತಿರಿ ಪ್ರಧಾನಿ ಮೋದಿಯವರೆ ಎಂದು ಪ್ರಶ್ನಿಸಿದರು.

ಹಾಸನ ಜಿಲ್ಲೆಯ ಜೆಡಿಎಸ್ ಶಾಸಕರಾದ ದೇವರಾಜ್ ಗೌಡ, ಕಳೆದ ಡಿಸೆಂಬರ್ ನಲ್ಲೇ ಈ ವಿಷಯವನ್ನು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಗಮನಕ್ಕೆ ತಂದು, ಹಲವು ದಾಖಲೆಗಳನ್ನೂ ನೀಡಿ ಪ್ರಜ್ವಲ್ ಗೆ ಟಿಕೆಟ್ ನೀಡಬಾರದೆಂದು ವಿನಂತಿಸಿದ್ದರು ಎಂದು ತಿಳಿಸಿದರು.

ಪ್ರಜ್ವಲ್ ನ ವಿಡಿಯೋಗಳು ಈಗಿನದಲ್ಲ, ನಾಲ್ಕು ವರುಷಗಳ ಹಿಂದಿನದು ಎಂದು ಅವರ ತಂದೆ ರೇವಣ್ಣ ಹೇಳಿದಕ್ಕೆ ಪ್ರತಿಕ್ರಿಯಿಸಿದ ಅವರು ಯಾವಾಗಲೇ ಮಾಡಿದ್ದರು ಅದು ತಪ್ಪೇ. ಅಕ್ಷಮ್ ಅಪರಾಧ. ವಿಡಿಯೋ ಬಿಡುಗಡೆಯಿಂದ ಸಾವಿರಾರು ಮಹಿಳೆಯರ ಬದುಕು ಆತಂಕಕ್ಕೋಳಗಾಗಿದೆ. ನಿಜವಾಗಿಯೂ ಆತಂಕಗೋಳಗಾಗಬೇಕಾದವನು ಪ್ರಜ್ವಲ್ ಮತ್ತು ಅವರ ತಂದೆ. ಅಪ್ಪ, ಮಗ ಇಬ್ಬರೂ 16 ವರುಷದ ಬಾಲಕಿ ಸೇರಿದಂತೆ 63- ವರುಷದ ಮಹಿಳೆಯವರೆಗೂ ಬಿಟ್ಟಿಲ್ಲ. ಅವರ ಮೋಸಕ್ಕೆ ದೌರ್ಜನ್ಯಕ್ಕೋಳಗಾದ ಯಾವ ಮಹಿಳೆಯರು ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಅವರು ವಿನಂತಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಸಚಿವ ಡಾ.ಸುಧಾಕರ್‌ , ಶಾಸಕರಾದ ರಾಜು ಸೇಠ, ವಿನಯ ಕುಲಕರ್ಣಿ, ಶಾಸಕಿ ನಯನಾ ಮೋಟಮ್ಮ , ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹಾಗೂ ಇತರರು ಹಾಜರಿದ್ದರು.

 

error: Content is protected !!