23/12/2024
IMG-20240429-WA0001_copy_576x432

ಬೆಳಗಾವಿ-೩೦: ” ನೀರಾವರಿ ಯೋಜನೆಯಾದ ಮೇಕೆದಾಟು ವಿಚಾರದಲ್ಲಿ ಕರ್ನಾಟಕವನ್ನು ನಿರ್ಲಕ್ಷ್ಯಸಿದ ಬಿಜೆಪಿ ಮುಖಂಡ ಅಣ್ಣಾಮಲೈಗೆ ರಾಜ್ಯದ ಮೇಲೆ ಯಾವ ಹಕ್ಕಿದೆ. ಅವರಿಗೆ ಬಿಜೆಪಿ ರಾಜ್ಯದ ಚುನಾವಣಾ ಜವಾಬ್ದಾರಿ ನೀಡಿರುವುದು ಅಪಹಾಸ್ಯಕರ ” ಎಂದು ಕೆಪಿಸಿಸಿ ವಕ್ತಾರರಾದ ಡಾ. ತೇಜಸ್ವಿನಿ ಗೌಡ ಕಿಡಿಕಾರಿದರು.

ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರ, ಮೇಕೆದಾಟು ಯೋಜನೆಯ ಪ್ರತಿಭಟನೆಯಲ್ಲಿ ರಾಜ್ಯದ ನೀತಿಯನ್ನು ಖಂಡಿಸಿದ ಬಿಜೆಪಿ ಮುಖಂಡ ಅಣ್ಣಾಮಲೈಗೆ ಇಲ್ಲಿನ ಬಿಜೆಪಿ ಚುನಾವಣೆ ಹೊಣೆ ಹೊರಿಸಲಾಗಿದೆ. ಬಿಜೆಪಿಗೆ ಸ್ವಲ್ವವಾದರೂ ಬುದ್ಧಿ ಬೇಡವಾ. ಯಾವ ಹಕ್ಕಿದೇ ಅಣ್ಣಾಮಲೈಗೆ ಇದು ನಮ್ಮ ನೇರ ಪ್ರಶ್ನೆ? ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿವರೆಗೂ ದೇಶದ ರಕ್ಷಣೆಗೆ ಶ್ರಮಿಸಿದ ಕಾಂಗ್ರೆಸ್‌ಗೆ ಪಾಠ ಹೇಳುವ ಅಗತ್ಯ ಬಿಜೆಪಿಗೆ ಇಲ್ಲ, ಕಳೆದ 10 ವರ್ಷದಲ್ಲಿ ದೇಶದ ಸ್ಥಿತಿ ಏನಾಗಿದೆ ಎಂಬುವುದು ದೇಶದ ಜನತೆಗೆ ಅರಿವಾಗಿದೆ. ಕಾರ್ಗಿಲ್‌ ಯುದ್ಧ ಸಂಭವಿಸಿದಾಗ ಬಿಜೆಪಿ ಏಲ್ಲಿತ್ತು ಎಂದು ಪ್ರಶ್ನಿಸಿದರು.

ಕಿಡಿಗೇಡಿಗಳಿಂದ ಸಂಸತ್ತನಲ್ಲಿ ಸಂಸದರ ಮೇಲೆ ಹಲ್ಲೆಯಾಗಿದೆ. ಇಲ್ಲಿವರೆಗೂ ಕೇಂದ್ರ ಸರ್ಕಾರ ಯಾವುದೇ ತನಿಖೆ ನಡೆಸಿಲ್ಲ, ಕಾಂಗ್ರೆಸ್‌ ಸರ್ಕಾರ ಅಧಿಕಾರ ಅವಧಿಯಲ್ಲಿ ಆದರೆ, ಸರ್ಕಾರದ ಬಿಜೆಪಿಗರು ಮುಗಿ ಬೀಳುತ್ತಿದ್ದರು ಯಾಕೆ ಇ ತರ ಮನಸ್ಥಿತಿ ನಿಮ್ಮದು.ತಪ್ಪಿಮಾಡಿದವರನ್ನು ಇನ್ನೂಳಿದ ಸಂಸದರನ್ನು ಅಮಾನತು ಮಾಡಿದೆ, ಪ್ರಜಾಪ್ರಭುತ್ವವನ್ನು ಕಟ್ಟಹಾಕಲು ನಾವು ಬೀಡುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಮಹಿಳೆಯವರು ಜತೆ ಅಶ್ಲೀಲ್‌ ವಾಗಿ ನಡೆದುಕೊಳ್ಳುವ ದುಸ್ಥಿತಿ ಇರುವ ಪಕ್ಷ ಜತೆ ಬಿಜೆಪಿಗರು ಹೇಗೆ ಇರುತ್ತಾರೆ. ಹೊಳೆನರಸಿಪುರ , ರಾಜ್ಯದ ಮಾನ ಮರ್ಯಾದೆ ಹಾಳಗಿದೆ. ಹೆಣ್ಣು ಮಕ್ಕಳಿಗೆ ಯಾವರೀತಿ ಗೌರವ ನೀಡಬೇಕು ಎಂಬುವುದು ಪರಿಜ್ಞಾನ ಇಲ್ಲವಾ ನಿಮಗೆ, ತಂದೆಯವರು ಇದನ್ನೇ ಕಲಿಸಿಕೊಟ್ಟಿದ್ದಾರೆ ಎಂದು ಜೆಡಿಎಸ್‌ ಗೆ ಚಾಟಿ ಬೀಸಿದರು.

ಕಾಂಗ್ರೆಸ್‌ ಪಕ್ಷಕ್ಕೆ ಇತಿಹಾಸ ಇದೆ. ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಪಂಚಾಯತ್‌ ರಾಜ್ಯ ಮೀಸಲಾತಿ ಜಾರಿಗೆ ತಂದ ಬಳಿಕ ಎಲ್ಲಸಮುದಾಯದ ಜನರು ರಾಜಕೀಯಕ್ಕೆ ಬರಲು ಅನುಕೂಲವಾಗಿದೆ. ಜಾತಿ-ಜಾತಿಗಳನ್ನು ಒಡೆಯಲು ಜಾತಿಗಳನ್ನು ಬಳಿಸುವವರು ಬಿಜೆಪಿಗರು, ಹೀಗಾಗಿ ಮಾಜಿ ಸಿಎಂ ಯಡಿಯೂರಪ್ಪರನ್ನು ಒಡೆಯಲು ಸವದಿ, ಸೋಮಣ್ಣ, ಈಶ್ವರಪ್ಪಯವರನ್ನು ಬಳಿಸಲಾಗಿದೆ. ಸಮಾಜ ಒಡೆಯುವ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ದೇಶದ ಜನತೆ ಅರಿತುಕೊಳ್ಳಬೇಕಿದೆ. ಸಮಾಜವನ್ನು ಒಗ್ಗೂಡಿಸುವ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ ಎಂದು ಹೇಳಿದರು.

ಬೆಳಗಾವಿ ಎರಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಶಾಲಿಯಾಗಲಿದೆ. ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತದಾರರು ಬಹುಮತ ಅಂತರದಿಂದ ಗೆಲಿಸಲು ಸಹಾಯ-ಸಹಕಾರ ನೀಡಬೇಕು ಎಂದು ಹೇಳಿದರು.

error: Content is protected !!