23/12/2024
IMG-20240408-WA0055

ಬೆಳಗಾವಿ-೦೮: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಂತಹ ಕಾಂಗ್ರೇಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು ಕೃಷಿಯನ್ನು ಸಂಪೂರ್ಣವಾಗಿ ನೆಲಕಚ್ಚಿಸುವ ಸಂಕಲ್ಪ ಮಾಡಿದಂತಿದೆ ಎಂದು‌ ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್. ಸಿದ್ದನಗೌಡರ ಹೇಳಿದ್ದಾರೆ.

ಸೋಮವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ರೈತ ನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸರ್ಕಾರದಲ್ಲಿ ಕೇಂದ್ರ ಸರ್ಕಾರದ ಕಿಸಾನ ಸಮ್ಮಾನ್ ಯೋಜನೆಯ 6 ಸಾವಿರ ರೂಪಾಯಿಯೊಂದಿಗೆ ರಾಜ್ಯದಿಂದ 4 ಸಾವಿರ ರೂಪಾಯಿ ನೀಡುತ್ತಾ ರಾಜ್ಯದ ರೈತರಿಗೆ ಆಸರೆಯಾಗಿತ್ತು. ಬರಗಾಲದ ಪರಸ್ಥಿತಿಯಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 4 ಸಾವಿರ ರೂ ನೀಡುವ ಐದನ್ನು ತಡೆಹಿಡೆದರು. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ಸಮಯದಲ್ಲಿ ರೈತರ ಮಕ್ಕಳ ವಿಧ್ಯಾಭ್ಯಾಸದ ಅನಕೂಲಕ್ಕಾಗಿ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದರು ಇದಕ್ಕೆ ಹಣನೀಡದೆ ರೈತರ ಮಕ್ಕಳ ಶಿಕ್ಷಣಕ್ಕೆ ಬರೆ ಹಾಕಿದ್ದಾರೆ. ಹಾಲು ಉತ್ಪಾದಕರಿಗೆ ಸಾವಿರದ ಎರಡನೂರು ಕೋಟಿ ರೂ ಗಳನ್ನು ಸಹಾಯ ಧನವನ್ನು ನೀಡಬೇಕಿತ್ತು ಆದರೆ ಸಹಾಯದನವನ್ನು ನೀಡುವ ಯೋಚನೆಯನ್ನು ಇದುವರೆಗೂ ಕಾಂಗ್ರೇಸ್ ಸರ್ಕಾರ ಮಾಡಿಲ್ಲ, ರೈತರಿಗೆ ಬಲ ನೀಡುವ ನಿಟ್ಟಿನಲ್ಲಿ ರೈತರಿಗೆ ಅನುಕೂಲವಾಗಲೇಂದು ಯಡಿಯೂರಪ್ಪನವರು “ನನ್ನ ಬೆಳೆ – ನನ್ನ ಹಕ್ಕು” ಅಡಿಯಲ್ಲಿ ಎ.ಪಿ.ಎಂ.ಸಿ ಕಾಯ್ದೆ ಜಾರಿಗೆ ತಂದರು ಆದರೆ ಕಾಂಗ್ರೇಸ್ ಸರ್ಕಾರ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಮಾರಕವಾದ ಕಾಯ್ದೆ ಜಾರಿಗೆ ತಂದು ರೈತರಿಗೆ ಅನ್ಯಾಯ ಮಾಡಿದೆ. ಕೃಷಿಗೆ ಮಿಸಲಿಟ್ಟಂತಹ 840 ಕೋಟಿ ಹಣವನ್ನು ಹಾಗೂ ಗ್ರಾಮೀಣಭಿವೃದ್ದಿಯ 759 ಕೋಟಿ ಹಣವನ್ನು ತಮ್ಮ ಶಕ್ತಿ ಯೋಜನೆಗಳಿಗೆ ಮಿಸಲಿಟ್ಟರು, ಬರ ನಿರ್ವಹಣೆಯಲ್ಲಿ ಕರ್ನಾಟಕ ಬಹಳ ಚಿಂತಾಜನಕ ಸ್ಥಿತಿಯಲ್ಲಿದೆ ರಾಜ್ಯದ 236 ತಾಲೂಕಿನ ಪೈಕಿ 223 ತಾಲೂಕು ಬರವನ್ನು ಎದುರಿಸುತ್ತಿದ್ದಾರೆ. ಈ ಪೈಕಿ 194 ತಾಲೂಕುಗಳು ತೀವ್ರತರವಾದಂತಹ ಬರವನ್ನು ಎದುರಿಸುತ್ತಿದ್ದಾವೆ ಸರ್ಕಾರ ಈ ಬರ ನಿರ್ವಹಣೆಗೆ ಯಾವುದೇ ರೀತಿಯ ಕ್ರಿಯಾತ್ಮಕವಾದ ಯೋಜನೆಯಾಗಲಿ, ಸಚಿವರ ಪ್ರವಾಸವಾಗಲಿ, ರೈತರ ಸಮಸ್ಯೆಯನ್ನು ಕೇಳುವಂತಾಗಲಿ ಯಾವುದೇ ರೀತಿಯ ಕಾರ್ಯಚಟುವಟಿಕೆಗೆ ಜಿಲ್ಲಾ ಸಚಿವರು ಹೋಗದೆ ಇರುವುದು ರೈತರನ್ನು ಅನಾಥರನ್ನಾಗಿಸಿದೆ. ಈಗಾಗಲೆ ತಾಪಮಾನ 40% ಗೆ ಹೋಗಿದೆ ಬೊರವೇಲ್‌ಗಳು ಬತ್ತಿ ಒಣಗಿ ಹೋಗಿವೆ ಹೊಸ ಬೊರವೇಲ್‌ಗಳನ್ನು ರೈತ ಈ ಹಿಂದೆ ಕೊರೆಸಲು ಹೋದರೆ ಅಡಿಗೆ 70 ರೂ ರಿಂದ 80 ರೂ ವರೆಗೆ ಖರ್ಚು ತಗಲುತಿತ್ತು ಆದರೆ ಇಂದು ಕೊರೆಸಲು 150 ರಿಂದ 160 ರೂ ಗಳಿಗೆ ಹೋಗಿ ನಿಂತಿದೆ ಅದನ್ನು ಸರಿಪಡಿಸುವ ವ್ಯವಸ್ಥೆಗೆ ಕಾಂಗ್ರೇಸ್ ಸರ್ಕಾರ ಹೋಗಿಲ್ಲ ಇದುವರೆಗು ಸಮಾರು 35167 ಕೋಟಿ ಬೆಳೆ ನಷ್ಟವಾಗಿದೆ ರೈತನ ಆತ್ಮ ಹತ್ಯೆಯಲ್ಲಿ ಕರ್ನಾಟಕ ರಾಜ್ಯ 2 ನೇ ಸ್ಥಾನದಲ್ಲಿದೆ. ಆತ್ಮಹತ್ಯೆ ಮಾಡಿಕೊಂಡ‌ ರೈತರ ಕುಟುಂಬಕ್ಕೆ ಪರಿಹಾರ ನೀಡದೆ ಕುಂಟ ನೆಪ‌ ಹೇಳಿ ಹೆಚ್ಚಿನ ಸಂಖ್ಯೆಯ ಕುಟುಂಬಕ್ಕೆ ಪರಿಹಾರ ನೀಡದೆ ತಿರಸ್ಕಾರ ಮಾಡುವದರೊಂದಿಗೆ ಆತ್ಮಹತ್ಯೆ ಮಾಡಿಕೊಂಡ‌ ರೈತರ ಕುಟುಂಬ ಕಣ್ಣಿರಿನಲ್ಲಿ ಕೈತೊಳೆಯುವಂತಾಗಿದೆ. ಹೀಗೆ ಒಟ್ಟಾರೆಯಾಗಿ ರಾಜ್ಯದ ರೈತನ ಪರಿಸ್ಥಿತಿಯನ್ನು ನೋಡಿದರೆ ಇದೊಂದು ರೈತ ವಿರೋಧಿ ಸರ್ಕಾರ ಅಂತಾ ಅತ್ಯಂತ ನೊವಿನಿಂದ ಹೇಳಲು ಬಯಸುತ್ತೇನೆ. ಇದು ಕೇವಲ ರೈತ ವಿರೋಧಿ ಸರ್ಕಾರವಲ್ಲ ಇದೊಂದು ಹಿಂದೂ ವಿರೋಧಿ ಸರ್ಕಾರ ಹಾಗೂ ಹೆಚ್ಚಾಗಿ ತು಼ಷ್ಟೀಕರಣದ ಪ್ರೇಮದ ಸರ್ಕಾರವಾಗಿದೆ. ತುಷ್ಟೀಕರಣ ಮಾಡುವುದೆಂದರೆ ಕಾಂಗ್ರೇಸ್ ನವರಿಗೆ ಬಹಳ ಖುಷಿ ಬೆಂಗಳೂರಿನಲ್ಲಿ ನಡೆದಂತಹ ಹನುಮಾನ ಚಾಲಿಸ ಹಾಕಿದಂತಹ ಅಂಗಡಿಯವನ ಮೇಲೆ ಅಲ್ಪಸಂಖ್ಯಾತರು ಬಂದು ದಾಳಿ ಮಾಡಿದಾಗ ಘಟನೆಯನ್ನು ಸರಿಯಾಗಿ ತನಿಖೆ ಮಾಡದೆ ಬದಲಾಗಿ ಅದನ್ನು ವಿರೋಧಿಸಲು ಹೋದ ಬಿಜೆಪಿ ನಾಯಕರ ಮೇಲೆ ಲಾಠಿ ಚಾರ್ಜ್ ಮಾಡಿಸಿ ಕೇಸ್ ಕೂಡಾ ದಾಖಲಿಸಿದರು. ಎಲ್ಲೂ ಕೂಡಾ ಆ ಘಟನೆ ತಪ್ಪು ಅಂತಾ ತುಟಿ ಬಿಚ್ಚಲಿಲ್ಲ ಹಾಗೂ ಮಂಡ್ಯದ ಕೆರೆಕೋಡಿನಲ್ಲಿ ಭಗವಾ ದ್ವಜವನ್ನು ಅಲ್ಲಿನ ಶಾಸಕ ಕಿತ್ತು ಹಾಕಿಸಿದ್ದು‌ಈ ಕುರಿತು ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದೆ. ಮುಜಾರಾಯಿ ಇಲಾಖೆಯಲ್ಲಿ 1 ಕೋಟಿಗೂ ಅಧಿಕ ವರಮಾನವಿರುವ ದೊಡ್ಡ – ದೊಡ್ಡ ಹಿಂದೂ ದೇವಸ್ಥಾನಗಳ ಶೇಕಡಾ 10 ರಷ್ಟು ಹಣವನ್ನು ಸರ್ಕಾರಕ್ಕೆ ನೀಡುವಂತ ಆದೇಶ ಹೊರಡಿಸಿದರು, ವಿಧಾನಸೌಧದಲ್ಲಿ ದೇಶವಿರೊಧಿ ಘೋಷಣೆ ಕೂಗಿ ಪರೋಕ್ಷವಾಗಿ ಪಾಕಿಸ್ತಾನವನ್ನು ಬೆಂಬಲಿಸುವುದು ಅಲ್ಪಸಂಖ್ಯಾತರು ತಾವು ರಾಜ್ಯದಲ್ಲಿ ಏನು ಮಾಡಿದರು ಆರಾಮವಾಗಿ ಜೈಲನಿಂದ ಪೋಲಿಸ ಠಾಣೆಯಿಂದ ಸುಲಭವಾಗಿ ಹೋರಗೆ ಬರಬಹುದು ನಮ್ಮ ರಕ್ಷಣಗೆ ಕಾಂಗ್ರೇಸ್ ಸರ್ಕಾರ ಇದೆ ಅನ್ನುವ ಪಟ್ಟಭದ್ರ ಮಾನಸಿಕತೆಯಿಂದ ಇವತ್ತು ಅವರ ಆರ್ಭಟ ಜೋರಾಗಿದೆ,ಬೆಳಗಾವಿಯಲ್ಲಿ ಬಸ್ ಚಾಲಕನಿಗೆ ನಡು ಬೀದಿಯಲ್ಲಿ ಎರ್ ಗನ್ ತೋರಿಸಿರುವ ಪ್ರಕರಣ ಜನರಲ್ಲಿ ಭಯ ಮೂಡಿಸುತ್ತಿದೆ.‌ ಚುನಾವಣೆಯಲ್ಲಿ ಕೊಟ್ಟಂತಹ ಆಶ್ವಾಸನೆ ಈಡೇರಿಕೆಗಾಗಿ 34 ಸಾವಿರ ಕೋಟಿ ಎಸ್.ಸಿ, ಎಸ್.ಟಿ ಸಮುದಾಯದ ಹಣವನ್ನು ಬೇರೆ ಬೇರೆ ಕೆಲಸ ಕಾರ್ಯಗಳಿಗೆ ವರ್ಗಾವಣೆ ಮಾಡುವ ಮೂಲಕ ದಲಿತ ವಿರೋಧಿ ಸರ್ಕಾರವಾಗಿದೆ ಎಂದು ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ

error: Content is protected !!