ಬೆಳಗಾವಿ-೦೮: ಅಥಣಿ ತಾಲೂಕಿನ ತೆಲಸಂಗ ಸಮೀಪದ ಚೆಕ್ ಪೋಸ್ಟ್ ಗೆ ಸೋಮವಾರ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಆಗಿರುವ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ ಅವರು, ಚೆಕ್ ಪೋಸ್ಟ್ ಗಳಲ್ಲಿ ಬರುವ ವಾಹನಗಳನ್ನು ಸರಿಯಾಗಿ ಪರಿಶೀಲನೆ ನಡೆಸಬೇಕು. ಯಾವುದೇ ನಿಯಮಗಳ ಉಲ್ಲಂಘನೆ ಆಗದಂತೆ ನಿಗಾವಹಿಸಬೇಕು ಎಂದು ಸೂಚಿಸಿದರು.
ಬಳಿಕ ಅಥಣಿ ಪಟ್ಟಣದ ತಹಶೀಲ್ದಾರರ ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿ, ಎಫ್.ಎಸ್.ಟಿ, ವ್ಹಿಎಸ್.ಟಿ, ವಿವಿಟಿ, ಸೆಕ್ಟರ್ ಅಧಿಕಾರಿಗಳಿಗೆ ಚುನಾವಣಾ ಪ್ರಕ್ರಿಯೆ ಬಗ್ಗೆ ಸಭೆ ನಡೆಸಿದರು. ಅಥಣಿ ಪಟ್ಟಣದ ಲಿಡಕರ್ ಕಾಲನಿಯಲ್ಲಿ ಮನೆ ಮನೆಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಾಗೃತಿ ಮೂಡಿಸಿದರು. ನಂತರ ಲಿಡರ್ ಕಾಲನಿಯ ಮತಗಟ್ಟೆಗೆ ತೆರಳಿ ಕನಿಷ್ಠ ಸೌಲಭ್ಯಗಳ ಕುರಿತು ಪರಿಶೀಲಿಸಿದರು.
ಅದೇ ರೀತಿ ತಾಲೂಕಿನ ಹಲ್ಯಾಳ ಹಾಗೂ ನಾಗನೂರ ಪಿ.ಕೆ ಹತ್ತಿರ ಇರುವ ಬಹು ಗ್ರಾಮ ಕುಡಿಯುವ ನೀರಿನ ಜಾಕವೆಲ್ ಗೆ ಭೇಟಿ ನೀಡಿ ಪರಿಶೀಲಿಸಿದರು. ತಂದನಂತರ ಪಂ.ರಾ.ಇಂ ಉಪ ವಿಭಾಗದಿಂದ ಅನುಷ್ಠಾನಗೊಂಡ ಹಲ್ಯಾಳ ದಿಂದ ರಡೇರಹಟ್ಟಿ ರಸ್ತೆ ಕಾಮಗಾರಿಗೆ ಭೇಟಿ ನೀಡಿದರು.
ತಾಪಂ ಇಒ ಶಿವಾನಂದ ಕಲ್ಲಾಪೂರೆ, ತಹಶೀಲ್ದಾರ ವಾಣಿ, ಪ.ರಾ.ಇಂ ಉಪ ವಿಭಾಗದ ಸಹಾಯಕ ಕಾರ್ಯಕಾರಿ ಅಭಿಯಂತರ ವೀರಣ್ಣ ವಾಲಿ, ಸಹಾಯಕ ಚುನಾವಣಾಧಿಕಾರಿ ಎಚ್. ಮಲ್ಲಿಕಾರ್ಜುನ, ಸಹಾಯಕ ನಿರ್ದೇಶ (ಗ್ರಾಉ) ಮೆಹಬೂಬ ಕೊತವಾಲ, ಸಹಾಯಕ ನಿರ್ದೇಶ (ಪಂ.ರಾಜ್) ಜಿ.ಎಸ್. ಮಠದ ಹಾಗೂ ಮತ್ತಿತರರು ಉಪಸ್ಥಿತರಿದ್ದರು.