ಬೆಳಗಾವಿ-೦೮: “ದೇಶದಲ್ಲಿ ಸಮಾನತೆ, ಶಾಂತಿಗಾಗಿ ದಲಿತ ಸಂಘರ್ಷ ಸಮಿತಿ-ಕರ್ನಾಟಕ (ರಿ) ಸಂಘಟನೆಗಳು ಸಂಪೂರ್ಣವಾಗಿ ಕಾಂಗ್ರೆಸ್ ಬೆಂಬಲ ನೀಡುತ್ತಿದ್ದೆವೆ ಎಂದು” ಡಿಎಸ್ ಎಸ್ ರಾಜ್ಯ ಸಂಚಾಲಕರಾದ ಬಾಳೇಶ ಬನಹಟ್ಟಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದ ರಕ್ಷಣೆ ಇಲ್ಲ, ಸಮಾನತೆ ಅಳಿಸಿ ಹೋಗುತ್ತಿದೆ. ದೇಶದ ಜನರು ಒಂದೇ ಎನ್ನುವ ಮನೋಭಾವನೆಯನ್ನು ಬುಡಸಮೇತ ಕಿತ್ತುಹಾಕುವ ತಂತ್ರವನ್ನು ಬಿಜೆಪಿಗರು ನಡೆಸುತ್ತಿದ್ದಾರೆ.
ಮದ್ಯಮ-ಕೆಳ ಸಮುದಾಯದ ಜನರನ್ನು ತುಳಿಯಲು ಬಿಜೆಪಿ ಟಾರ್ಗೆಟ್ ಮಾಡಿದೆ. ಬೇರೆ ಸಂಘಟನಗಳಿಗೆ ಬಿಜೆಪಿಯಿಂದ ಬೆಂಬಲ ಇಲ್ಲವಾಗಿದೆ. ಇನ್ನೂಳಿದ ಸಂಘಟನೆಗಳು ನಿರ್ಮಾಣವಾದರೆ, ಅವುಗಳನ್ನು ಹತ್ತಿಕ್ಕುವ ಯತ್ನವು ನಡೆದಿದೆ ಎಂದು ಹೇಳಿದರು.
ದೇಶ ಹಿತ ಮುಖ್ಯವಾಗಿದೆ. ಹೀಗಾಗಿ, ದಲಿತ ಸಂಘರ್ಷ ಸಮಿತಿ-ಕರ್ನಾಟಕ (ರಿ) ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಸಹ ಕಾಂಗ್ರೆಸ್‌ಗೆ ದೇಶಾದ್ಯಂತ ಬೆಂಬಲ ನೀಡಲಾಗುತ್ತಿದೆ. ಈಗಾಗಲೇ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಆಗಿದ್ದು, ಬೆಳಗಾವಿ, ಚಿಕ್ಕೋಡಿ ಲೋಕಸಭಾ ಚುನಾವಣೆ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿಗಳಾದ ಪ್ರಿಯಂಕಾ ಜಾರಕಿಹೊಳಿ- ಮೃಣಾಲ್ ಹೆಬ್ಬಾಳಕರ್ ಗೆ ಡಿಎಸ್ ಎಸ್ ಸಂಘಟನೆಯವರು ಸಂಪೂರ್ಣ ಬೆಂಬಲ ನೀಡುತ್ತೆವೆ. ಕಾಂಗ್ರೆಸ್ ಎರಡು ಅಭ್ಯರ್ಥಿಗಳ ಗೆಲುವಿಗೆ ಚುನಾವಣೆಯಲ್ಲಿ ಶ್ರಮಿಸುತ್ತೆವೆ ಎಂದು ಹೇಳಿದರು.
ಈಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಾಯಿಸಿ, ” ಹಿಂದೂ ಧರ್ಮದ ಹೆಸರಿನಲ್ಲಿ ಧರ್ಮ ಸಂಸತ್ ಸ್ಥಾಪಿಸಿ ಮೇಲ್ಜಾತಿಯ ಹಿಡಿತವನ್ನು ಸ್ಥಾಪಿಸುವುದು ಅವರ ಗುರಿಯಾಗಿದೆ. ಬಿಜೆಪಿಗರು ದೇಶದಲ್ಲಿ 400 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಉದ್ದೇಶದಿಂದ ಅಪಾರವಾದ ಅಕ್ರಮ ಹಣವನ್ನು ಕೂಡಿಟ್ಟುಕೊಂಡಿದ್ದಾರೆ. ಮತ್ತು, ವಿರೋಧ ಪಕ್ಷಗಳು ತಂತ್ರ ರೂಪಿಸಿ ಇಡಿ-ಐಟಿ ದಾಳಿ ಮಾಡುತ್ತಿದ್ದಾರೆ. ಸರ್ಕಾರ ಅಧಿಕಾರಿಗಳು ಸಹ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಚಿನ್ನಿಗಾನಹಳ್ಳಿ ರಾಮಚಂದ್ರ, ಮಂಜುನಾಥ ಅಣ್ಣಯ್ಯ, ಲಕ್ಕಪ್ಪ ತಳಗಡೆ, ಗೀತಾ ಸಣ್ಣಕ್ಕಿ, ಆನಂದ ಲಕ್ಷ್ಮಣ, ಸುರೇಶ ಸಣ್ಣಕ್ಕಿ, ತಾಯವ್ವಗೋಳ, ಅಲ್ಲಾಬಾಕ್ಸ ಮುಲ್ಲಾ, ಆಕಾಶ ಕೆರೆಮನೆ ಹಾಗೂ ಇತರರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತಿರಿದ್ದರು