ಬೆಳಗಾವಿ-೦೮:ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶೌರ್ಯ ಚೌಕ್, ಐಡಿಬಿಐ ಬ್ಯಾಂಕ್ ಶಿಬಿರ, ಸ್ವಾಮಿ ವಿವೇಕಾನಂದ ಚೌಕ್, ಹನುಮಾನ್ ಮಂದಿರ, ಸಂಯುಕ್ತ ಮಹಾರಾಷ್ಟ್ರ ಚೌಕ್ , ಗವಳಿ ಗಲ್ಲಿ ಹಾಗೂ ಸರ್ದಾರ್ ಮೈದಾನದಲ್ಲಿ ಚಾಯ್ ಪೇ ಚರ್ಚಾ ಮೂಲ ಸಾರ್ವಜನಿಕರನ್ನು ಭೇಟಿ ಮಾಡಿ , ಮತಯಾಚನೆ ನಡೆಸಲಾಯಿತು.
ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಜೀ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ಎಲ್ಲ ರಂಗಗಳಲ್ಲಿ ಅಭಿವೃದ್ಧಿಯಾಗುತ್ತಿದ್ದು, ಮತ್ತೊಮ್ಮೆ ನಾವೆಲ್ಲರೂ ಶ್ರೀ ನರೇಂದ್ರ ಮೋದಿಜೀ ಅವರನ್ನು ಪ್ರಧಾನಮಂತ್ರಿಗಳಾಗಿ ಆಯ್ಕೆ ಮಾಡಲು ಶ್ರಮಿಸೋಣ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ಶಂಕರಗೌಡ ಪಾಟೀಲ್, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ರಮೇಶ ದೇಶಪಾಂಡೆ, ಪಾಲಿಕೆ ಸದಸ್ಯರಾದ ಜಯತೀರ್ಥ ಸವದತ್ತಿ, ಸಂದೀಪ ಜೀರಗ್ಯಾಳ, ಅಶೋಕ, ಮಂಡಲ ಅಧ್ಯಕ್ಷರಾದ ವಿಜಯ ಕೊಡಗ್ನೂರ,ಮುಖಂಡರಾದ ಶ್ರೀ ರವಿ, ಶ್ರೀ ರವಿ ಕಲಘಟಗಿ, ಸೌರಭ ಸಾವಂತ, ಸುಜಯ್ ಬಾಳೆಕುಂದ್ರಿ, ಓಂಕಾರ ಹೊಂಗೆಕರ್, ಶ್ರೀ ರಾಜೇಶ್ ಚೌವ್ಹಾಣ, ಅಶೋಕ ದೇಶಪಾಂಡೆ, ಶ್ರೀಮತಿ ಶಿಲ್ಪಾ ಕೆಕರೆ, ಶೈಲೇಶ್ , ಶ್ರೀ ವಿನೋಧ ಲಂಗೋಟಿ, ರಮೇಶ ಪಾಟೀಲ, ಅಶೋಕ ತೋರಟ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು