ಬೆಳಗಾವಿ-೨೭ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಹತ್ತಿರ ಅಧಿಕಾರ ಇದ್ದಾಗ,ಅವರ ಜನ್ಮ ಭೂಮಿ,ಮತ್ತು ಕರ್ಮ ಭೂಮಿ ಒಂದೇ ಆಗಿತ್ತು, ಅಧಿಕಾರ ಕಳೆದುಕೊಂಡು ಹತಾಶರಾದ ಬಳಿಕ ಕರ್ಮ ಭೂಮಿಯನ್ನು ಬದಲಾಯಿಸುವದು ಸರಿಯಲ್ಲ. ಅಧಿಕಾರ ಇದ್ದಾಗ ಅವರು ಮಾಡಿದ ಕರ್ಮದ ಫಲ ಅವರ ಜನ್ಮ ಭೂಮಿಗೆ ಸಿಕ್ಕಿದೆ. ಅಧಿಕಾರ ಕಳೆದುಕೊಂಡ ಬಳಿಕ ಜನ್ಮ ಭೂಮಿಯಿಂದ ಪಲಾಯನ ಮಾಡುವದು ಜನ್ಮ ಭೂಮಿಗೆ ಮಾಡಿದ ದ್ರೋಹ ಎಂದು ರಾಜಕುಮಾರ ಟೋಪಣ್ಣವರ ಆರೋಪಿಸಿದ್ದಾರೆ.
ಜಗದೀಶ್ ಶೆಟ್ಡರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿ ಜಿಲ್ಲೆಗೆ ಅವರ ಕೊಡುಗೆ ಏನೂ ಇಲ್ಲ, ಬೆಳಗಾವಿಗೆ ಮಂಜೂರಾಗಿದ್ದ ಅನೇಕ ಕೇಂದ್ರದ ಯೋಜನೆಗಳನ್ನು ಪ್ರಲ್ಹಾದ್ ಜೋಶಿ,ಮತ್ತು ಜಗದೀಶ್ ಶೆಟ್ಟರ್ ಅವರು ಕೊಡಿಕೊಂಡು ಅನೇಕ ಯೋಜನೆಗಳನ್ನು ಬೆಳಗಾವಿಯಿಂದ ಹುಬ್ಬಳ್ಳಿಗೆ ಶಿಪ್ಟ್ ಮಾಡಿಸುವ ಮೂಲಕ ಕ್ರಾಂತಿಯ ಭೂಮಿ ಬೆಳಗಾವಿಗೆ ಮೋಸ,ಮತ್ತು ಅನ್ಯಾಯ ಮಾಡಿದ ಕೀರ್ತಿ ಜಗದೀಶ್ ಶೆಟ್ಟರ್ ಅವರಿಗೆ ಸಲ್ಲುತ್ತದೆ ಎಂದು ಟೋಪಣ್ಣವರ ಲೇವಡಿ ಮಾಡಿದ್ದಾರೆ.
ಜಗದೀಶ್ ಶೆಟ್ಟರ್ ಅವರ ಜನ್ಮ ಭೂಮಿ ಧಾರವಾಡ- ಹುಬ್ಬಳ್ಳಿಯಲ್ಲೇ ತಮ್ಮ ಕರ್ಮದ ಫಲವನ್ನು ಕಳೆದುಕೊಂಡಿದ್ದಾರೆ.ಈಗ ಅವರು ಅವಳಿ ನಗರದಲ್ಲಿ ಕಳೆದುಕೊಂಡಿರುವ ಫಲವನ್ನು ಕುಂದಾ ನಗರಿಯಲ್ಲಿ ಹುಡುಕಿದ್ರೆ ಅವರಿಗೆ ಸಿಗಲು ಸಾಧ್ಯವೇ ಇಲ್ಲ,ಅವರು ಅದನ್ನು ಅವಳಿ ನಗರದಲ್ಲೇ ಹುಡುಕಾಡುವದು ಸೂಕ್ತ ಎಂದು ರಾಜೀವ ಟೋಪಣ್ಣವರ ಶೆಟ್ಟರ್ ಅವರಿಗೆ ಸಲಹೆ ನೀಡಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಬೆಳಗಾವಿಯಲ್ಲಿ ಮನೆ ಮಾಡುವದಾಗಿ ಹೇಳಿದ್ದಾರೆ.ಬೆಳಗಾವಿ ನನ್ನ ಕರ್ಮ ಭೂಮಿ ಎಂದು ಹೇಳುವ ಮೂಲಕ ಜನುಮ ಭೂಮಿ ಹುಬ್ಬಳ್ಳಿಯ ಜನರಿಗೆ ಅವಮಾನಿಸಿದ್ದಾರೆ.ಶೆಟ್ಟರ್ ಅವರ ಧೋರಣೆಗೆ ಬಿಜೆಪಿಯಲ್ಲೇ ಗೋ ಬ್ಯಾಕ್ ಶೆಟ್ಟರ್ ಶುರುವಾಗಿದೆ.ಶೆಟ್ಟರ್ ಪ್ರವೇಶದಿಂದ ಬೆಳಗಾವಿ ಬಿಜೆಪಿ ಹುಬ್ಬಳ್ಳಿಯ ವಶವಾಗಿದೆ. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಿದ್ದಾರೆ ಎಂದು ಟೋಪಣ್ಣವರ ಪ್ರಕಟಣೆಯಲ್ಲಿ ಟೀಕೆ ಮಾಡಿದ್ದಾರೆ.