23/12/2024
IMG-20240327-WA0001

IMG 20240310 WA0006 -

ಬೆಳಗಾವಿ-೨೭: ಕೊನೆಗೂ ಬೀಗರ ಕ್ಷೇತ್ರಕ್ಕೆ ಫಿಕ್ಸ್ ಆಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬುಧವಾರ ಅಧಿಕೃತವಾಗಿ ಬೆಳಗಾವಿ ಲೋಕ ಕದನಕ್ಕೆ ಧುಮುಕಿದ್ದಾರೆ. ಅಬ್ಬರದ ಪ್ರಚಾರಕ್ಕೆ ಇಳಿದಿರುವ ಶೆಟ್ಟರ್ ರಾಜಾಹುಲಿ ಸಾಥ್ ತೆಗೆದುಕೊಂಡಿದ್ದಾರೆ.

ಇಬ್ಬರು ಮಾಜಿ ಸಿಎಂಗಳು ಒಟ್ಟಿಗೇ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಮಲ ಅರಳಿಸುವುದಕ್ಕೆ ಭರ್ಜರಿ ಪ್ರಚಾರ ಕಾರ್ಯ ಶುರುಮಾಡಿಕೊಂಡಿದ್ದಾರೆ. ಬುಧವಾರ ಬೆಳಗಾವಿಗೆ ಆಗಮಿಸಿದ ಮಾಜಿ ಸಿಎಂ ಯಿಡಿಯೂರಪ್ಪ ಕೋಟೆಯ ದುರ್ಗಾದೇವಿ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡರು.

IMG 20240327 WA0000 -

ನಂತರದಲ್ಲಿ ಚೆನ್ನಮ್ಮ ಸರ್ಕಲ್‌ನಲ್ಲಿ ಚೆನ್ನಮ್ಮ ಮೂರ್ತಿಗೆ, ಅಂಬೇಡ್ಕರ್ ಗಾರ್ಡನ್‌ನಲ್ಲಿ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ತೆರೆದ ವಾಹನದಲ್ಲಿ ಬಹಿರಂಗ ಪ್ರಚಾರಕೆಕ ಧುಮುಕಿದರು. ಈ ವೇಳೆಯಲ್ಲಿ ಬಿಜೆಪಿಯ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಬೈಕ್ ರ‍್ಯಾಲಿ ಮೂಲಕ ಪ್ರಚಾರಕ್ಕೆ ಮತ್ತಷ್ಟೂ ಬಲ ತುಂಬಿದರು.

ಬೆಳಗಾವಿ ಗೆದ್ದು ಬೀಗುವುದಕ್ಕೆ ಅಣಿಯಾಗಿರುವ ಶೆಟ್ಟರ್‌ಗೆ ಬಿಎಸ್‌ವೈ, ಎನ್. ರವಿಕುಮಾರ್, ಈರಣ್ಣ ಕಡಾಡಿ, ಅನಿಲ ಬೆನಕೆ, ಅಭಯ ಪಾಟೀಲ ಸೇರಿದಂತೆ ಇನ್ನೀತರ ಬಿಜೆಪಿಯ ನಾಯಕರು, ಮುಖಂಡರು ಹಾಗೂ ನೂರಾರು ಕಾರ್ಯರ್ಕರು ಸಾಥ್ ಕೊಟ್ಟರು.

error: Content is protected !!