23/12/2024

IMG 20240310 WA0006 -

ಬೆಳಗಾವಿ-೨೭:ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ, ಬೆಳಗಾವಿ ಪ್ರಕರಣ ಸಂ.05/2024 ಕಲಂ.7(ಎ) ಪಿಸಿ
ಕಾಯ್ದೆ-I988 (ತಿದ್ದುಪಡಿ-2018) ನೇದ್ದರ ಆಪಾದಿತ ಅಧಿಕಾರಿಯಾದ ಶ್ರೀ ದುರದುಂಡೇಶ್ವರ ಮ. ಬನ್ನೂರ,
ಎಇಇ ಪಂಚಾಯತ ರಾಜ್ ಇಂಜೀನಿಯರಿಂಗ್ ಉಪ ವಿಭಾಗ, ಖಾನಾಪೂರ ರವರು, ನರೇಗಾ
ಕಾಮಗಾರಿಗಳಿಗೆ ತಾಂತ್ರಿಕ ಅನುಮೋಧನೆ ನೀಡಲು ಗ್ರಾಮ ಪಂಚಾಯತಿ ಸದಸ್ಯರೊಬ್ಬರಿಂದ ಲಂಚ
ಪಡೆಯುತ್ತಿದ್ದ ವೇಳೆ ಸದರಿಯವರನ್ನು ದಿನಾಂಕ: 26.03.2024 ರಂದು ಟ್ರ್ಯಾಕ್ ಮಾಡಲಾಗಿರುತ್ತದೆ. ಬಳಿಕ
ಸದರಿಯವರು ವಾಸವಿರುವ ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿನ ಅವರ ಮನೆ ಮೇಲೆ ದಾಳಿ
ಮಾಡಿ ಶೋಧನೆ ಕೈಕೊಂಡ ಕಾಲಕ್ಕೆ ಲೆಕ್ಕವಿಲ್ಲದ ಒಟ್ಟು ರೂ.27,75,000/- ನಗದು ಹಣ ಮತ್ತು ಬೆಲೆ
ಬಾಳುವ ವಸ್ತುಗಳು ಪತ್ತೆಯಾಗಿದ್ದು, ಸದರಿ ನಗದು ಹಣವನ್ನು ಮುಂದಿನ ತನಿಖೆ ಕುರಿತು ಜಪ್ತ
ಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿರುತ್ತದೆ.

IMG 20240327 WA0004 -
ಸದರಿ ಮನೆ ಶೋಧನೆಯನ್ನು ಮಾನ್ಯ ಶ್ರೀ ಹನಮಂತರಾಯ್, ಎಸ್.ಪಿ. ಕಲೋ ಬೆಳಗಾವಿ ರವರ
ಮಾರ್ಗದರ್ಶನದಲ್ಲಿ ಶ್ರೀಮತಿ. ಪುಷ್ಪಲತಾ, ಡಿಎಸ್‌, ಶ್ರೀ ನಿರಂಜನ್ ಎಂ. ಪಾಟೀಲ, ಪಿಐ.
ಸಿಬ್ಬಂದಿಗಳಾದ ಶ್ರೀ ರವಿ ಮಾವರಕರ, ಶ್ರೀಮತಿ, ರಾಜಶ್ರೀ ಭೋಸಲೆ, ಶ್ರೀ ಅಭಿಜಿತ ಜಮಖಂಡಿ ಮತ್ತು
ಎನ್.ಎಂ.ಮಠದ ತಂಡದವರಿಂದ ಕೈಗೊಳ್ಳಲಾಗಿರುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದರು.

error: Content is protected !!