ಬೆಳಗಾವಿ-೨೭.ಭರತೇಶ ಶಿಕ್ಷಣ ಸಂಸ್ಥೆಯ ಜೆಜಿಎನ್‌ಡಿ ಭರತೇಶ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತಿಚಿಗೆ ನವೀನ ಬೋಧನೆ-ಸಂಶೋಧನೆ ಮತ್ತು ಅಭಿವೃದ್ದಿಯತ್ತ ಇಂದು ಪ್ರಾಡಿಗ್ಮ ಶೀಪ್ಟ ವಿಷಯದ ಒಂದು ದಿನದ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರ ನಡೆಯಿತು.
ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿತಾವಿಯ ವ್ಯವಸ್ಥಾಪನ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ.ಎಂ.ಮುನ್ಶಿ ಹಾಗೂ ರಾನಿ ಚೆನ್ನಮ್ಮ ವಿಶ್ವ ವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾಗ ಡಾ.ಎಸ್.ಬಿ ಆಕಾಶ ಅವರು ಆಗಮಿಸಿ ಸೃಜನಾತ್ಮಕ ಬೋಧನಾ ಸಾಧನೆಗಳು ಮತ್ತು ಅದರ ಫಲಿತಾಂಶ ಆಧಾರಿತ ಕಲಿಕೆಯ ಬಗ್ಗೆ ಮಾಹಿತಿ ನೀಡಿ ಅಧ್ಯಾಪಕರು ಸಂಶೋಧಣೆಯ ಪ್ರಾಮುಖ್ಯತೆ ಮೇಲೆ ಹೆಚ್ಚಿನ ಆಸಕ್ತಿ ಹೊಂದಿರಬೇಕೆಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾಲ ಖೇಮಲಾಪೂರೆ, ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಹೀರಾಚಂದ ಕಲಮನಿ, ಪ್ರಾಂಶುಪಾಲ ಸುನಿತಾ ದೇಶಪಾಂಡೆ, ನೀತಾ ಗಂಗರಡ್ಡಿ ಸೇರಿದಂತೆ ಮೊದಲಾದವರು ಹಾಜರಿದ್ದರು.