ಬೆಳಗಾವಿ-೨೩: ನಗರದ ಸುತ್ತಮುತ್ತಲಿನ ಫಲವತ್ತಾದ ಭೂಮಿಗಳಲ್ಲಿ ಆಗುವ ರಾಷ್ಟ್ರೀಯ ಹೆದ್ದಾರಿಯನ್ನು ರದ್ದುಗೊಳಿಸಿ ನಗರದಲ್ಲಿ ಪ್ಲೇವರ್ ಶತಕ್ಷಣ ಮಾಡಿ ರೈತರ ಭೂಮಿ ಉಳಿಸಿ ಎಂದು ನೇಗಿಲಯೋಗಿ ರೈತ ಸೇವಾ ಸಂಘ ಬೆಳಗಾವಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಚೆನ್ನಮ್ಮ ವೃತ್ತದಲ್ಲಿ ಬ್ಯಾನರ್ ಹಿಡಿದುಕೊಂಡು, ಉರುಳಾಡಿ ವಿನೂತನವಾಗಿ ಪ್ರತಿಭಟಿಸಿದ ರೈತರು ರಸ್ತೆ ಕಾಮಗಾರಿಯನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸುತ್ತಮುತ್ತಲಿನ ಇರುವ ಎಲ್ಲ ಫಲವತ್ತಾದ ಭೂಮಿಯಾಗಿದ್ದು, ಬೆಳ ಬೆಳೆಯುತ್ತಾರೆ. 2000 ಇಸವಿಯಲ್ಲಿ ಆಗಿನ ರಾಜ್ಯದ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ಅವರು ನಗರ
ಅಭಿವೃದ್ಧಿಯವರ ಮುಖಾಂತರ ಸರ್ವೆ ಮಾಡಿಸಿದರು. ಸರ್ವೆ ವರದಿಯ ಪುಕಾರ ಈ ಭೂಮಿಯ ಆಳ 50 ರಿಂದ 60 ಪುಟ ಎರಿ ಮಣ್ಣು ಹೊಂದಿದ್ದು ಇರುತ್ತದೆ. ರಾಷ್ಟ್ರೀಯ ಹೆಮ್ಮಾರಿ ಮಾಡುವುದು ಇಲ್ಲಿ ಸೂಕ್ತ ಅಲ್ಲ ಎಂದುತಿಳಿಸಿರುತ್ತಾರೆ ಎಂದು ಸಂಘ ಮನವಿ ಮಾಡಿಕೊಂಡಿತು.
ಕಳೆದ 2019ರಲ್ಲಿ ಇರುವ ಬಿಜೆಪಿ ಸರ್ಕಾರ ವರ್ಕ್ ಆರ್ಡರ್ ಇಲ್ಲದೆ.ಮತ್ತು ಜಮೀನ್ ಇರುವ ರೈತರಿಗೆ ತಿಳಿಸದ ಹಾಗೂ ನ್ಯಾಯಾಲಯದ ಆದೇಶ ಗಾಳಿಗೆ ತೂರಿ ರಾಷ್ಟ್ರೀಯ ಹೆದ್ದಾರಿ ನಿಗಮ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದವರು ಹಾಲಗೆ ಮಧ್ಯೆ ಬಾಯಿಪಾಸ್ ಮತ್ತು ರಿಂಗ್ ರೋಡ್ ಮಾಡುವ ಉದ್ದೇಶದಿಂದ ಪೊಲೀಸರ ಮುಖಾಂತರ ಜಮೀನು ಕಳೆದುಕೊಳ್ಳುವಂತಹ ರೈತರಿಗೆ ನಾನಾ ತರಹದಿಂದ ತೊಂದರೆ ಉಂಟು ಮಾಡಿರುತ್ತಾರೆ. ಈಗಿನ ನೂತನ ಸರ್ಕಾರ ನಗರದಲ್ಲಿ ಪ್ಲೇವರ್ ಯೋಜನೆ ಸೀಗ್ರದಲ್ಲಿ ಮಾಡುವ ಕಾರ್ಯ ತೆಗೆದುಕೊಂಡು ನಗರದ ಸುತ್ತು ಮುತ್ತಲಿನ ಭೂಮಿಯನ್ನು ಉಳಿಸಿ ಎಂದು ಸಂಘ ಅಧಿಕಾರಿಗಳಲ್ಲಿ ಮನವಿ ಈ ಸಂದರ್ಭದಲ್ಲಿ ಮಾಡಿಕೊಂಡರು.