ಬೆಳಗಾವಿ-೨೩: ಇಲ್ಲಿಯ ದಿ , ಇನ್ಸ್ಟಿಟ್ಯೂಟ್ ಆಫ್ ಇಂಜನಿಯರ್ಸ ಸ್ಥಾನಿಕ ಸಂಸ್ಥೆ ಬೆಳಗಾವಿಯಲ್ಲಿ ಮಾ.22 ರಂದು ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಯಿತು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯ ಅಭಿಯಂತರರು ಜಲ ಸಂಪನ್ಮೂಲ ಇಲಾಖೆ ಹಾಗೂ ಎಡಿಬಿ ಬ್ಯಾಂಕಿನ ಸಮಾಲೋಚಕರಾದ ಜಿ.ಎಂ.ಶಿವಕುಮಾರ ಅವರು ಆಗಮಿಸಿ ನೀರಿನ ಸದ್ಬಳಕೆಗೆ ಅಗತ್ಯವಾಗಿರುವ ನೀರಾವರಿ ಯೋಜನೆಗಳ ಆಧುನಿಕರಣ ಬಗ್ಗೆ ಮಾತನಾಡಿದರು. ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಸಿವಿಲ ಇಂಜನಿಯರಿಂಗ ವಿಭಾಗ ಮುಖ್ಯಸ್ಥ ಡಾ.ನಾಗರಾಜ ಪಾಟೀಲ ಅವರು ಮಾತನಾಡಿ, ವಿಶ್ವ ವಿದ್ಯಾನಿಲಯದಲ್ಲಿ ನೀರು ಸದ್ಬಳಕೆ ಹಾಗೂ ಮಳೆ ನೀರು ಸಂಗ್ರಹಣೆಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಅಭಿಯಂತರರಾದ ಎಸ್.ಎಸ್.ಖಣಗಾವಿ ಅವರು ವಹಿಸಿದ್ದರು. ಬಿ.ಜಿ.ಧರೆಣ್ಣಿ ಸೇರಿದಂತೆ ಸಂಸ್ಥೆಯ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ವೆಂಕಟೇಶ ಅತಿಥಿಗಳನ್ನು ಸ್ವಾಗತಿಸಿದರು.ಸಂಸ್ಥೆಯ ಸದಸ್ಯರಾದ ವಿಲಾಸ ಬದಾಮಿ ಅತಿಥಿಗಳನ್ನು ಪರಿಚಯಿಸಿದರು. ಸಿ.ಬಿ.ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಶರನಪ್ಪನ್ನವರ ವಂದಿಸಿದರು.