ಬೆಳಗಾವಿ-೨೨:ಕುಂದಾನಗರಿ ಬೆಳಗಾವಿ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಜಸ್ವೀರ್ ಸಿಂಗ್ ಹೆಸರಿನ ವ್ಯಕ್ತಿಯ ಬಳಿಯಿಂದ ೧.೫೦ಲಕ್ಷ ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ತಹಶೀಲ್ದಾರ ನೀಡಿದ್ದ ಮಾಹಿತಿ ಆಧಾರದಲ್ಲಿ ಸ್ಥಳಕ್ಕೆ ದೌಡಾಯಿಸಿ ಮಾರಿಹಾಳ ಎಫ್‌ಎಸ್‌ಟಿ ಟೀಮ್ ಬಿನಲ್ಲಿರುವ ಶಶಿಕಾಂತ ಕೂಳೇಕರ ಅವರು ವ್ಯಕ್ತಿಯಿಂದ ಬ್ಯಾಗ್‌ನಲ್ಲಿದ್ದ ನಗದನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಈ ಹಣವನ್ನು ಜಪ್ತಿ ಮಾಡಿಕೊಂಡಿರುವ ಬಗ್ಗೆ ಅಧಿಕಾರಿ ವಿಡಿಯೋ ದಾಖಲಿಸಿಕೊಂಡು ಮಾಹಿತಿ ನೀಡಿದ್ದಾರೆ.
ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.