ಬೆಳಗಾವಿ-28 : ಉದ್ಯೋಗ ಖಾತರಿ ಯೋಜನೆಯ ಜೊತೆಗೆ ಇತರ ಉದ್ಯೋಗ ತರಬೇತಿ ಪಡೆದುಕೊಳ್ಳಬೇಕೆಂದು ಸಹಾಯಕ ನಿರ್ದೇಕರಾದ (ಗ್ರಾ.ಉ) ಸವಿತಾ ಎಮ್. ಅವರು ನರೇಗಾ ಕೂಲಿ ಕಾರರಿಗೆ ತಿಳಿಸಿದರು.
ತಾಲ್ಲೂಕಿನ ಕಲಖಾಂಬ ಗ್ರಾಮದ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣ ಮಾಡಲಾದ ಹೊಸಕೆರೆ ಕಾಮಗಾರಿ ಸ್ಥಳದಲ್ಲಿ ಗುರುವಾರ ಡಿಸೆಂಬರ್ 28 ರಂದು ಆಯೋಜಿಸಿದ್ದ ರೋಜ್ಗಾರ ದಿನದ ಅಂಗವಾಗಿ ಅವರು ಮಾತನಾಡಿದರು.
ಉದ್ಯೋಗ ಖಾತರಿ ಯೋಜಯಡಿ 100 ದಿನ ಪೂರೈಸಿದ ಕೂಲಿಕಾರರು ಸ್ವಸಹಾಯ ಸಂಸ್ಥೆಯಿಂದ ಇತರ ತರಬೇತಿಯಗಳನ್ನು ಪಡೆದುಕೊಂಡು ತಮ್ಮ ಜೀವನದಲ್ಲಿ ಆರ್ಥಿಕವಾಗಿ ಸದೃಢರಾಗಬೇಕು.ನರೇಗಾ ಕೂಲಿಕಾರ್ಮಿಕರು ಕೇವಲ ಸಮುದಾಯ ಕಾಮಗಾರಿಗಳಿಗೆ ಅವಲಂಬಣೆಯಾಗದೆ, ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗೋಪಾಲ ಗೊಡಸಿ, ತಾಂತ್ರಿಕ ಸಂಯೋಜಕ ನಾಗರಾಜ ಯರಗುದ್ದಿ, ಐಇಸಿ ಸಂಯೋಜಕ ರಮೇಶ ಮಾದರ, ಗಣಕ ಯಂತ್ರ ನಿರ್ವಾಹಕ ನಾಗರಾಜ ಕಾಂಬಳೆ ಸೇರಿದಂತೆ ಗ್ರಾಮ ಪಂಚಾತಯ ಸಿಬ್ಬಂದಿಗಳು ಉಪಸ್ಥಿತಿ ರಿದ್ದರು.