ಹುಬ್ಬಳ್ಳಿ-೧೧:ಪಶ್ಚಿಮ ಬಂಗಾಳದ ಸಂದೇಶಕಾಲಿ ಯಲ್ಲಿ ಹಿಂದುಳಿದ ಸಮಾಜಗಳ ಮಹಿಳೆಯರು ಮತ್ತು ಬಡ ಕುಟುಂಬಗಳ ಮೇಲೆ ನಿರಂತರ ನಡೆದ ಅಮಾನುಷ ದೌರ್ಜನ್ಯಗಳನ್ನು ಖಂಡಿಸಿ ಮಾದಿಗ ದಂಡೋರ MRPS ಸಂಘಟನೆಯ ಪ್ರಮುಖರು ಮತ್ತು ಸಮಾಜ ಸಾಮರಸ್ಯದ ಪ್ರಮುಖರು ಹುಬ್ಬಳ್ಳಿ ನಗರದಲ್ಲಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಆಗ್ರಹ ಮನವಿಯನ್ನು ಸಲ್ಲಿಸಿದರು.
ಈ ಸಮಯದಲ್ಲಿ ಮಾದಿಗ ದಂಡೋರ(MRPS)ದ ಉತ್ತರ ಕರ್ನಾಟಕ ವಿಭಾಗೀಯ ಅಧ್ಯಕ್ಷರಾದ ಶ್ರೀ ಮಂಜುನಾಥ ಕೊಂಡಪಲ್ಲಿ , ಸಾಮರಸ್ಯದ ಶ್ರೀ ರಾಮಯ್ಯ , ಶ್ರೀ ಪ್ರಕಾಶ್, ಶ್ರೀ. ಶ್ರೀ ಧರ್ ಜೋಶಿ, ಶ್ರೀ ಎಲ್ಲಪ್ಪ ಬಾಗಲಕೋಟೆ, ಶ್ರೀ ರಂಗನಾಯಕ ತಪೇಲಾ, ಗೋವಿಂದ ಬೆಳ್ದೋಣಿ, ಸೀತಾರಾಮ ಹರಿಜನ, ಶ್ರೀ ಕೃಷ್ಣಮೂರ್ತಿ, ಸತ್ಯನಾರಾಯಣ ಎಂ, ಆನಂದ ಮಾದರ, ಅಣ್ಣಪ್ಪ ಕತ್ರಿಮಲ್ ಮುಂತಾದವರು ಉಪಸ್ಥಿತಿರಿದ್ದರು.