ಬೆಳಗಾವಿ-೧೧:ಬೆಳಗಾವಿ ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ರೈತರಿಗಾಗಿ ಕೃಷಿ ಉತ್ಸವ ಆಯೋಜಿಸಿ ಅದ್ಬುತ ಕೆಲಸ ಮಾಡಿದ್ದಾರೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ಸೋಮವಾರ ಇಲ್ಲಿನ ಸಿಪಿಎಡ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ವತಿಯಿಂದ ಆಯೋಜಿಸಲಾಗಿದ್ದ ಐದು ದಿನಗಳ ಕಾಲ ನಡದ ಕೃಷಿ ಉತ್ಸವದ ಸಮಾರೋಪ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಸಂಸ್ಥೆ ಸಾಮಾನ್ಯ ರೈತರನ್ನು ಪ್ರೋತ್ಸಾಹಿಸುವ ಮೂಲಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಐದು ದಿನಗಳ ಕಾಲ ಆಯೋಜಿಸಿರುವ ಕೃಷಿ ಉತ್ಸವದ ಲಾಭವನ್ನು ರೈತರು ಪಡೆದುಕೊಂಡಿರುವುದು ಸಂತಸದ ಸಂಗತಿ ಎಂದರು.
ಹಿಂದೆ ಗುರು ಇರಬೇಕು. ಮುಂದೆ ಗುರು ಇರಬೇಕು ಎನ್ನುವ ಹಾಗೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಕೃಷಿ ಉತ್ಸವ ಆಯೋಜಿಸಿ ರೈತರಿಗೆ ಸಾಕಷ್ಟು ಉಪಯುಕ್ತ ಮಾಹಿತಿ ನೀಡಿದ್ದಾರೆ ಎಂದರು.
ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೈತ ದೇಶದ ಸಂಪತ್ತು. ಆ ಸಂಪತ್ತು ಕೃಷಿಯಲ್ಲಿ ಇನ್ನಷ್ಟು ಸಮೃದ್ಧವಾಗಬೇಕು ಎನ್ನುವ ಉದ್ದೇಶದಿಂದ ಐದು ದಿನಗಳ ಕಾಲ ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಕೃಷಿ ಉತ್ಸವ ಆಯೋಜಿಸಿ ಬೆಳಗಾವಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಕೃಷಿಯಲ್ಲಿ ಚಿನ್ನದ ಬೆಳೆ ಬೆಳೆಯುವ ಸಾಮಥ್ರ್ಯ ನಮ್ಮ ಯುವಕಲ್ಲಿದೆ. ಆದರೆ ಅವರು ಕೃಷಿಯ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಯುವಕರು ಕೃಷಿಯತ್ತ ಮುಖ ಮಾಡುವ ಅವಶ್ಯಕತೆ ಇದೆ ಎಂದರು.
ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಅಧ್ಯಕ್ಷ ಮಂಜುನಾಥ ಅಳವಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ದೊಡ್ಡ ಜಿಲ್ಲೆ. ರೈತ ಕುಟುಂಬದಿಂದ ಬಂದ ನಾನು. ನಮ್ಮ ಜಿಲ್ಲೆಯ ರೈತರಿಗೆ ಏನಾದರೂ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ನಮ್ಮ ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಪರಿವಾರದವರೊಂದಿಗೆ ಚರ್ಚೆ ನಡೆಸಿ ಕೃಷಿ ಉತ್ಸವ ಮಾಡಲು ನಿರ್ಧಾರ ಮಾಡಿದ್ದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಐದು ದಿನಗಳ ಕಾಲ ಕೃಷಿ ಉತ್ಸವ ಆಯೋಜಿಸಿ ಯಶಸ್ವಿಯಾಗಿದ್ದೇವೆ ಎಂದರು.
ಯುವಕರು ಕೃಷಿಯಲ್ಲಿ ನಿರಂತರವಾಗಿ ತಡಗಿಕೊಳ್ಳಬೇಕು. ಯುವಕರು ದೇಶದ ಆಸ್ತಿ. ಕೃಷಿ ದೇಶದ ಸಂಪತ್ತು. ಎಲ್ಲರೂ ಕೃಷಿಯತ್ತ ಮುಖ ಮಾಡಿ ನಮ್ಮ ದೇಶದ ಸಂಸ್ಕೃತಿ ಉಳಿಸಬೇಕಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿಯೂ ಕೃಷಿ ಉತ್ಸವ ನಡೆಸುವ ಚಿಂತನೆ ನಡೆಸಿದ್ದೇವೆ. ನಿಮ್ಮೆಲ್ಲರ ಸಹಕಾರ ನಮ್ಮೊಂದಿಗೆ ಇರಲಿ ಎಂದರು.
ಆನಂದ ಕುಲಕರ್ಣಿ, ಹರ್ಷ ದಾವಡ್ಕರ್, ಸಾಥ್ವಿಕ, ಅಭಯ ಜೋಶಿ, ಶಕೀಲ್ ಶೇಖ ಅಲಿ, ಅಕ್ಷತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.