23/12/2024
IMG-20240311-WA0001

IMG 20240310 WA0006 -

ಬೆಳಗಾವಿ-೧೧:ಕರ್ನಾಟಕ ಸರ್ಕಾರ ಪ್ರತಿ ವರುಷ ಫಾಲ್ಗುಣ ಶುದ್ಧ ತ್ರಯೋದಶಿಯಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸಲು ನಿರ್ಧರಿಸಿದೆ. ಈ ವರುಷ ಮಾರ್ಚ 23ರಂದು ಸರ್ಕಾರ ತಾಲೂಕಾ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಆಚರಿಸುವಂತೆ ಸೂಚಿಸಿರುವುದು ಸಂತೋಷದ ಸಂಗತಿ. ರಾಜ್ಯ ಸರ್ಕಾರದಿಂದ ಆಚರಿಸಲ್ಪಡುವ ಸುಸಂದರ್ಭದಲ್ಲಿ ಆಯಾ ಭಾಗದ ವೀರಶೈವ ಲಿಂಗಾಯತ ಸಮುದಾಯ ಅಷ್ಟೇ ಅಲ್ಲ ಸರ್ವರೂ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಶ್ರೀ ಜಗದ್ಗುರು ರೇಣುಕಾಚಾರ್ಯರು ಸಾಮಾನ್ಯರಲ್ಲ. ಅಸಾಮಾನ್ಯ ಘನ ವ್ಯಕ್ತಿತ್ವ ಹೊಂದಿ ಸಕಲ ಸಮುದಾಯಗಳ ಹಿತವನ್ನು ಬಯಸಿದವರು, ಜನ ಸಮುದಾಯದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾಂತಿಗೈದ ಪರಮಾಚಾರ್ಯರು. ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ 18 ಜಾತಿ ಜನಾಂಗಗಳ ಧಾರ್ಮಿಕ ಕೇಂದ್ರ ಹುಟ್ಟು ಹಾಕಿ ಸಂಸ್ಕಾರ ಸಂಸ್ಕೃತಿ ಅರುಹಿದವರು. ಪುರುಷರಂತೆ ಮಹಿಳೆಯರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ತಂದು ಕೊಟ್ಟ ಪ್ರಥಮಾಚಾರ್ಯರು, ಕಾಯಕ ಮತ್ತು ದಾಸೋಹ ಭಾವನೆ ಮೂಲಕ ಕ್ರಿಯಾತ್ಮಕ ಬದುಕಿಗೆ ಕರೆಕೊಟ್ಟವರು.
ಮಹಾಮುನಿ ಆಗಸ್ತರಿಗೆ ಶಿವಾದೈತ ಸಿದ್ಧಾಂತವನ್ನು ಬೋಧನೆಗೈದು ಅಸ್ಪಶೋದ್ಧಾರಗಗೈದ ಕಾರಣ ಪುರುಷರು. ಜಾತಿಗಿಂತ ನೀತಿ ತತ್ವಕ್ಕಿಂತ ಆಚರಣೆ ಮಾತಿಗಿಂತ ಕೃತಿ ಬೋಧನೆಗಿಂತ ಸಾಧನೆ ದಾನಕ್ಕಿಂತ ದಾಸೋಹ ಚರಿತ್ರೆಗಿಂತ ಚಾರಿತ್ರ್ಯ ಮಿಗಿಲೆಂದು ಸಾರಿದ ಪರಮಾಚಾರ್ಯರು, ಜಾತಿ ಮತ ಪಂಥಗಳ ಗಡಿ ಮೀರಿ ಮಾನವೀಯತೆಯ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿದ ಕಾರುಣ್ಯಶೀಲರು. ನೊಂದವರ ಬೆಂದವರ ಧ್ವನಿಯಾಗಿ ಸಕಲ ಸಮುದಾಯಗಳ ಶ್ರೇಯಸ್ಸನ್ನು ಬಯಸಿದವರು ಶ್ರೀ ಜಗದ್ಗುರು ರೇಣುಕಾಚಾರ್ಯರು. ಅಂಥ ಮಹಿಮಾನ್ವಿತರ ಜಯಂತಿ ಆಚರಣೆಯಲ್ಲಿ ಸರ್ವರೂ ಪಾಲ್ಗೊಳ್ಳಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಶ್ರೀ ಪೀಠದಿಂದ ಕರೆ ಕೊಟ್ಟಿದ್ದಾರೆ.

error: Content is protected !!