23/12/2024
IMG_20240304_233503

IMG 20240221 WA0004 3 -

ಬೆಳಗಾವಿ-೦೯: ದೇಶದ ಜನತೆಯ ಹಿತ ಕಾಪಾಡುವದರೊಂದಿಗೆ ಪ್ರಪಂಚದಲ್ಲಿ ಭಾರತದ ಆರ್ಥಿಕತೆಯನ್ನು 5ನೇ ಸ್ಥಾನಕ್ಕೆ ನಿಲ್ಲಿಸುವದರೊಂದಿಗೆ ಜನಸಾಮನ್ಯರ ಅಡುಗೆ ಅನಿಲ್ ಸಿಲಿಂಡರ್ ಬೆಲೆ‌ ನೂರು ರೂಪಾಯಿ ಕಡಿಮೆ ಮಾಡುವದರೊಂದಿಗೆ ಸಾಮಾನ್ಯರ ಬದುಕಿಗೆ ಮೋದಿ ಗ್ಯಾರಂಟಿ ಬಂದು ತಲುಪುತ್ತಿದೆ ಎಂದು‌ ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ‌‌ ಸದಸ್ಯ ಎಫ್.ಎಸ್.ಸಿದ್ದನಗೌಡರ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾ ಪ್ರಕಟಣೆ ಹೊರಡಿಸಿ, 2014ರ ಮುಂಚೆ ಸಬ್ಸಿಡಿ ರಹಿತ ಎಲ್.ಪಿ.ಜಿ. ಸಿಲಿಂಡರ್ ‌ಬೆಲೆ 1241 ರೂಪಾಯಿಗಳಷ್ಟಿತ್ತು. ಆದರೆ 2024 ರಲ್ಲಿ 805 ರೂಪಾಯಿಗಳಿಗೆ ದೊರೆಯುತಿದ್ದು ಇದು ಮೋದಿಯವರ ಗ್ಯಾರಂಟಿಯಾಗಿದೆ. ದೇಶದ ಆರ್ಥಿಕ ಸ್ಥಿತಿ ಗತಿಗಳನ್ನು ನದಲ್ಲಿಟ್ಟುಕೊಂಡು ಕಳೆದ 10ವರ್ಷದಲ್ಲಿ ಬೆಲೆ ಏರಿಕೆ ಬಿಸಿ ಒಂದು ಕಡೆಯಾದರೆ ಮೋದಿಜಿಯವರ ಆಡಳಿತದಲ್ಲಿ ಪ್ರತಿಯೊಬ್ಬರು ಬಳಸುವ ಎಲ್.ಪಿ.ಜಿ.ಸಿಲಿಂಡರ್ ಬೆಲೆ‌ 436 ರೂಪಾಯಿ ಕಡಿಮೆಯಾಗಿದೆ. ಇನ್ನು ಮುಂದೆ‌805 ರೂಪಾಯಿಗೆ ಸಿಲಿಂಡರ್ ದೊರೆಯಲಿದೆ. ಇದು ಅಡುಗೆ ಅನಿಲ‌ಬಳಕೆದಾರರಿಗೆ ಅತ್ಯಂತ ‌ಅನಕೂಲಕರವಾಗಲಿದೆ ಎಂದಿದ್ದಾರೆ.

error: Content is protected !!