ಬೆಳಗಾವಿ-೦೯:ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಹಾಂತೇಶ ನಗರ, ಬೆಳಗಾವಿ ಮತ್ತು ಶಹಾಪುರ ಶಾಖೆ ವತಿಯಿಂದ ೮೮ನೇ ತ್ರಿಮೂರ್ತಿ ಶಿವ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪ್ರಮುಖ ಬೀದಿಗಳಲ್ಲಿ ಶಿವ ಲಿಂಗ ಹೊತ್ತ ರಥಯಾತ್ರೆ ಹಾಗೂ ಶಾಂತಿಯಾತ್ರೆ ವಿಬೃಂಜನೆಯಿಂದ ನೇರವೇರಿತು. ಮುಂಜಾನೆ ಶಿವ ಧ್ವಜಾರೋಹಣ ಮತ್ತು ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ}} ಅಶ್ವಿನಿ ನರಸಣ್ಣವರ, ಕ್ಯಾನ್ಸರ ವೈದ್ಯರು, ಆರೋಗ್ಯವಾದ ದೇಹದಲ್ಲಿ ಆರೋಗ್ಯವಾದ ಮನಸ್ಸು ಇರುತ್ತದೆ. ನಾನು ಯಾರು ಎಂಬುದನ್ನು ಅರಿಯಬೇಕು. ನಮ್ಮೊಳಗೆ ನಾವಿರಬೇಕು, ದೇಹದಲ್ಲಿ ಆತ್ಮ ಇದ್ದಾಗ ಶರೀರಕ್ಕೆ ಬೆಲೆ ಇದೆ ಎಂದು ಹೇಳಿದರು.
ಶಹಾಪುರ ಸೇವಾಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮೀನಾಕ್ಷಿ ಅಕ್ಕನವರು ಮಾತನಾಡುತ್ತ, ಶಾಂತಿಗಾಗಿ ಮೇಡಿಟೇಶನ ಬಹಳ ಅವಶ್ವವಿದೆ, ರಾಜಯೋಗದ ತರಬೇತಿ ಪಡೆಯುವುದರಿಂದ ಬಹಳ ಉಪಯುಕ್ತವಿದೆ ಎಂದು ಹೇಳಿದರು. ಸಂಸ್ಥೆಯ ಪರಿಚಯವನ್ನು ರಾಜಯೋಗಿನಿ ಬ್ರಹ್ಮಾಕುಮಾರಿ ರಾಧಿಕಾ ಅಕ್ಕನವರು ನೀಡಿದರು. ಬ್ರಹ್ಮಾಕುಮಾರಿ ಪ್ರಗತಿಯವರು ಹಾಗೂ ಸರ್ಕಾರಿ ಶಾಲೆ ನಂಬರ ೧೭ ವಿದ್ಯಾರ್ಥಿಗಳು, ಕುಮಾರಿ ಅಂಕಿತಾ, ಅನನ್ಯ, ಸ್ನೇಹಾ ಇವರು ಅತ್ಯುತ್ತಮ ಭರತ ನಾಟ್ಯ ಮಾಡಿ ಮನರಂಜಿಸಿದರು.
ಸ್ವಾಗತ ಭಾಷಣ ಮತ್ತು ನಿರೂಪಣೆಯನ್ನು ಬ್ರಹ್ಮಾಕುಮಾರ ದತ್ತಾತ್ರೇಯ ಮಾಡಿದರು, ಬ್ರಹ್ಮಾಕುಮಾರ ಸುರೇಶ ಮತ್ತು ಬ್ರಹ್ಮಾಕುಮಾರಿ ಸ್ವಾತಿ ಶಿವನ ಸಂದೇಶ ನೀಡಿದರು.