ಬೆಳಗಾವಿ-09: ದೇಶದಲ್ಲಿ ವೈದ್ಯರು, ಸ್ವಾಮೀಜಿ, ವಿಜ್ಞಾನಿ, ಚಿನ್ನದ ವ್ಯಾಪಾರಿ, ರಾಜಕಾರಣಿಗಳು ಇಲ್ಲದಿದ್ದರೂ ನಡೆಯುತ್ತದೆ ಆದರೆ ರೈತರು ಇಲ್ಲದಿದ್ದರೇ ನಾವೆಲ್ಲರೂ ಬೀದಿ ಪಾಲಾಗಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಕೃಷಿಯತ್ತ ಮುಖ ಮಾಡಿದರೆ ಮಾತ್ರ ಜಗತ್ತು ಉಳಿಯಲು ಸಾಧ್ಯ ಎಂದು ಬೈಲೂರು ನಿಷ್ಕಲ್ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಶನಿವಾರ ಇಲ್ಲಿನ ಸಿಪಿಎಡ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ ಹಾಗೂ ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ವತಿಯಿಂದ ಆಯೋಜಿಸಲಾಗಿರುವ ಕೃಷಿ ಉತ್ಸವದ ಮೂರನೇ ದಿನದ ಕಾರ್ಯಕ್ರಮದ ಯುವಕರಿಗೆ ಕೃಷಿ ಮಾರ್ಗದರ್ಶನದ ವಿಷಯ ಕುರಿತು ಮಾತನಾಡಿದರು.
ಮನುಷ್ಯ ನಾಗರಿಕತೆಯ ಭರಾಟೆಯಲ್ಲಿ ಪ್ರಕೃತಿಯ ಮೂಲ ಸಂಸ್ಕೃತಿಯನ್ನು ಮರೆತ್ತಿದ್ದಾನೆ. ಮುಖ್ಯವಾಗಿ ಮನುಷ್ಯನಿಗೆ ಕೃಷಿಯ ಬಗ್ಗೆ ಜ್ಞಾನ ಬರಬೇಕಿದೆ.ಮನುಷ್ಯನಿಗೆ ಅಧಿಕಾರ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಮನುಷ್ಯನಿಗೆ ಅನ್ನ, ಅರಿವು, ಆಶ್ರಯ ಬೇಕು. ಸಾಕಷ್ಡು ಜನರಿಗೆ ಅನ್ನ ಎಲ್ಲಿ ಸಿಗುತ್ತದೆ ಎನ್ನುವ ಅರಿವು ಇರುವುದಿಲ್ಲ. ಶಿಕ್ಷಣ ಮನುಷ್ಯನ ಬದುಕಿನ ಜ್ಞಾನ ಬದಲಾವಣೆ ಮಾಡಿದೆ. ಆದರೆ ಕೃಷಿಯ ಬಗ್ಗೆ ಅರಿವು ಇಲ್ಲ. ಮೊದಲು ಅದನ್ನು ಅರಿವು ಮಾಡಿಕೊಳ್ಳಬೇಕು ಎಂದರು.
ದೇಶದಲ್ಲಿ 50, 60 ವರ್ಷದ ಬಳಿಕ ಆಹಾರದ ಕೊರತೆಯುಂಟಾಗುತ್ತದೆ. ಆಗ ದೊಡ್ಡ ದೊಡ್ಡ ಅಧಿಕಾರಿಗಳು ಕೃಷಿ ಭೂಮಿ ಇರುವ ರೈತರ ಕಡೆ ಬರುವ ಕಾಲ ಬರಲಿದೆ ಎಂದು ಭವಿಷ್ಯ ನುಡಿದರು.
ಜಗತ್ತಿನಲ್ಲಿ ತಂತ್ರಜ್ಞಾನ, ಆವಿಷ್ಕಾರ, ಪ್ರಜಾಪ್ರಭುತ್ವ ಬರಬಹುದು. ಆದರೆ ಜನರಿಗೆ ಅನ್ನ ಎಲ್ಲಿಂದ ಬರುತ್ತದೆ ಎನ್ನುವ ಮಾಹಿತಿ ಇಲ್ಲ. ಕೃಷಿ ಎನ್ನುವುದು ಏನು ಎನ್ನುವ ಭಾವನೆ ಜನರಿಗೆ ಗೋತ್ತಿಲ್ಲ ಎಂದರು.
ಕೃಷಿ ಎಂದರೆ ಎಲ್ಲಿ ಮನುಷ್ಯ, ಪ್ರಾಣಿ, ಪಕ್ಷಿಗಳಿವೆ. ಅಲ್ಲಿ ಜಮೀನು ಇದೆ. ರೈತ ಇಡೀ ದೇಶಕ್ಕೆ ಅನ್ನ ಕೊಡುತ್ತಾನೆ. ಅವನಿಗೆ ಮೊದಲು ಗೌರವ ಕೊಡುವ ಕೆಲಸ ಮಾಡಬೇಕು. ಅಂದಾಗ ಮಾತ್ರ ನಮ್ಮ ಕೃಷಿಗೆ ಒಂದು ಅರ್ಥ ಬರುತ್ತದೆ. ರೈತ ದೇಶದ ನಿಜವಾದ ವಿಜ್ಞಾನಿ ಎಂದರು.
ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಮೊದಲು ಶಾಲೆಗಳ ಅಭಿವೃದ್ಧಿ, ಕರೆಗಳ ಅಭಿವೃದ್ಧಿ, ಸಾಮಾಜಿಕ ಕಾರ್ಯ ಮಾಡಿ ಯಶಸ್ಚಿಯಾಗಿದ್ದಾರೆ. ಈಗ ಕೃಷಿ ಉತ್ಸವ ಆಯೋಜಿಸಿದ್ದಾರೆ. ಈ ಉತ್ಸವದ ಬಗ್ಗೆ ಹಳ್ಳಿಯ ಕಡೆಗೂ ಬಂದು ಪ್ರಚಾರ ಮಾಡುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಹರದ ಜನರು ಎಲ್ಲಿಯವರೆಗೆ ಹಳ್ಳಿ ನೋಡುವುದಿಲ್ಲವೋ ಅಲ್ಲಿಯವರೆಗೆ ಕೃಷಿಯ ಬಗ್ಗೆ ನಮಗೆ ತಿಳಿಯುವುದಿಲ್ಲ. ಆದುನಿಕ ದಿನಮಾನಗಳಲ್ಲಿ ಕೃಷಿ ಬಗ್ಗೆ ಚಿಂತನೆ ಮಾಡಬೇಕಿದೆ. ಮುಂಬರುವ ದಿನಗಳಲ್ಲಿ ಸಾವಯವ ಕೃಷಿ ಮಾಡಿದರೆ ಮಾತ್ರ ಉಳಿಗಾಲ ಇದೆ ಎಂದರು.
ಪ್ಯಾಸ್ ಫೌಂಡೇಶನ್ ನ ಡಾ. ಮಾಧವ ಪ್ರಭು ಮಾತನಾಡಿ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗುತ್ತದೆ. ಆದ್ದರಿಂದ ಜನರು ನೀರನ್ನು ಮಿತವ್ಯಯವಾಗಿ ಬಳಕೆ ಮಾಡಬೇಕು ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಹಿಂದಿನ ಕೃಷಿ ಪದ್ಧತಿಗೂ ಈಗಿನ ಕೃಷಿ ಪದ್ಧತಿಗೂ ಸಾಕಷ್ಟು ವ್ಯತ್ಯಾಸ ಇದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಕೃಷಿ ಉತ್ಸವದಲ್ಲಿ ರೈತರಿಗೆ ಅನುಕೂಲವಾಗುವ ಯಂತ್ರೋಪಕರಣಗಳು ಇವೆ. ಇದರ ಬಗ್ಗೆ ಮಾಹಿತಿ ಪಡೆದುಕೊಂಡು ರೈತರು
ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಅಧ್ಯಕ್ಷ ಮಂಜುನಾಥ ಅಳವಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಐದು ವರ್ಷದ ಹಿಂದೆಯೇ ಕೃಷಿ ಉತ್ಸವ ಆಯೋಜನೆ ಮಾಡಬೇಕೆಂದು ನಿರ್ಧಾರ ಮಾಡಿದ್ದೇವು ಎಂದರು.
ಬೈಲೂರು ನಿಷ್ಕಲ ಮಂಟದ ಶ್ರೀ ನಿಜಗುಣಾನಂದ ಸ್ವಾಮೀಜಿ ಹಾಗೂ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಮಾರ್ಗದರ್ಶನದಲ್ಲಿ ಈ ಉತ್ಸವ ಆಯೋಜನೆ ಮಾಡಿದ್ದೇವೆ ಎಂದರು.
ರೈತರು ಜಮೀನು ಬಿಟ್ಟು ಹೊರಗಡೆ ಹೋಗುವುದಿಲ್ಲ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೆಚ್ವಿನ ಆದಾಯ ಗಳಿಸಿಕೊಳ್ಳಬೇಕೆಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪಕುಮಾರ ಕುರಂದವಾಡೆ, ಡಾ. ಗಿರೀಶ್ ಸೋನವಾಲ್ಕರ್, ಅವಿನಾಶ ಪೋತದಾರ, ಅಜಯ ಹೆಡಾ, ಶಕೀಲ್ ಶೇಖ್, ಅಭಯ ಜೋಶಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.