ಬೆಳಗಾವಿ-೦೯: ಪ್ರತಿ ವರ್ಷದಂತೆ ಕಪಿಲೇಶ್ವರ ಮಂದಿರ ಸರಿದಂತೆ ನಗರದ ವಿವಿದೆಡೆ ಸಂಭ್ರಮದಿಂದ ಮಹಾಶಿವರಾತ್ರಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಮಹಾ ಶಿವರಾತ್ರಿ ಅಂಗವಾಗಿ ಭಕ್ತರು ವಿವಿಧ ದೇವಸ್ಥಾನ ತೆರಳಿ ಶಿವನ ದರ್ಶನ ಪಡೆದರು.ಗುರುವಾರ ರಾತ್ರಿ ವಿವಿಧ ದೇವಸ್ಥಾನದಲ್ಲಿ ನಾಗರೀಕರು ರುದ್ರಾಭಿಷೇಕ ಮಾಡಿ ಸಂಭ್ರಮದಿಂದ ಓಂ ನಮಃ ಶಿವ ಎಂದು ಜಪಿಸುತ್ತಾ ಮಹಾ ಆರತಿ ನೆರವೇರಿಸಿ ಅಭಿಷೇಕ ನಡೆಸಿದರು.
ಹಾಗೆಯೇ ಭಕ್ತರು ಶುಕ್ರವಾರ ಉಪವಾಸ ಇರುವುದರಿಂದ ಶನಿವಾರ ದಿನಾಂಕ 9/3/24 ಶನಿವಾರದಂದು ಮಹಾಪ್ರಸಾದವನ್ನು ಸಹ ವಿವಿಧ ಕಡೆ ಆಯೋಜಿಸಲಾಗಿದೆ.