23/12/2024
IMG-20240308-WA0049

IMG 20240221 WA0004 3 -
ಬೆಳಗಾವಿ-08: ಇಂದಿನ ಯುವಕರು ಡಾಕ್ಟರ್, ಎಂಜಿನಿಯರ್ ಸೇರಿದಂತೆ ಬೇರೆ ಬೇರೆ ಅಧ್ಯಯನ ಮಾಡಿ ಹಳ್ಳಿಯಲ್ಲಿರುವ ಯುವಕರು ಕೃಷಿ ಕಡೆ ಗಮನ ಹರಿಸದೆ ಇರುವುದು ಅಪಾಯಕಾರಿ ಬೆಳವಣಿಗೆ. ಯುವಕರಲ್ಲಿ ಕೃಷಿ ಬಗ್ಗೆ ಆಸಕ್ತಿಯನ್ನು ಹುಟ್ಟಿಸುವ ಅವಶ್ಯಕತೆ ಇದೆ. ಯುವಕರು ಬೇರೆ ಬೇರೆ ವಿಷಯದಲ್ಲಿ ಅಧ್ಯಯನ ಮಾಡಿ. ಆದರೆ ರಜೆ ವೇಳೆಯಲ್ಲಿ ಹಳ್ಳಿಗೆ ಬಂದು ನಿಮ್ಮ ಕೃಷಿ ಭೂಮಿಯ ಬಗ್ಗೆ ಗಮನ ಹರಿಸಿ ಭೂಮಿ ಸೇವೆಯನ್ನು ಮಾಡಿ ಎಂದು ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

IMG 20240308 WA0047 -IMG 20240308 WA0048 -ಶುಕ್ರವಾರ ಇಲ್ಲಿನ ಸಿಪಿಎಡ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ ಹಾಗೂ ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಸಹಯೋಗದಲ್ಲಿ ಐದು ದಿನಗಳ ಕಾಲ ಆಯೋಜಿಸಿರುವ ಕೃಷಿ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಇಂದಿನ ಯುವಕರಲ್ಲಿ ಕೃಷಿಯ ಬಗ್ಗೆ ಆಸಕ್ತಿ ‌ಕಡಿಮೆಯಾಗುತ್ತಿದೆ. ಕೃಷಿಯಲ್ಲಿ‌ ಆಧುನಿಕ ತಂತ್ರಜ್ಞಾನ ಅಳವಡಿಸಿ ಕೃಷಿಗೆ ಸಹಕಾರಿಯಾಗುವ ಸೌಲಭ್ಯದ ಬಗ್ಗೆ ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಮಾಡುತ್ತಿರುವುದು ಶ್ಲಾಘನೀಯ ಎಂದರು.
ವಿಎಚ್ ಪಿಯ ಪ್ರಮುಖರಾದ ವಿಠ್ಠಲ್ ಜಿ. ಮಾತನಾಡಿ, ಹುಕ್ಕೇರಿ ಹಿರೇಮಠದ ಶ್ರೀಗಳು ಕೃಷಿಯ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಎಲ್ಲರಿಗೂ ಮಾರ್ಗದರ್ಶನ ಮಾಡುತ್ತ ಬಂದಿದ್ದಾರೆ. ಮಂಜುನಾಥ ಅಳವಣಿ ಅವರು ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಅಧ್ಯಕ್ಷರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಬೆಳಗಾವಿಯಲ್ಲಿ ಕೃಷಿ ಉತ್ಸವ ಮಾಡುವುದರ ಮೂಲಕ ಈ ಭಾಗದ ಜನರಿಗೆ ವಿಶೇಷವಾಗಿರುವ ಮಾರ್ಗದರ್ಶನ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಅಧ್ಯಕ್ಷ ಮಂಜುನಾಥ ಅಳವಣಿ ಮಾತನಾಡಿ, ಹುಕ್ಕೇರಿ ಚಂದ್ರಶೇಖರ ಸ್ವಾಮೀಜಿ ಅವರು ಬೆಳಗಾವಿ ಕೃಷಿ ಉತ್ಸವಕ್ಕೆ ತಾವೇ ಆಗಮಿಸಿ ನಮಗೆಲ್ಲ ಕೃಷಿ ಬಗ್ಗೆ ಇನ್ನೂ ಹೆಚ್ಚಿನ ಮಾರ್ಗದರ್ಶನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿರುವ ಎಲ್ಲಾ ಮಠಾಧೀಶರು ಮಾ.11ರವರೆಗೆ ಜರಗುವ ಕೃಷಿ ಉತ್ಸವದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡುವಂತೆ ಕೇಳಿಕೊಳ್ಳುತ್ತೇವೆ ಎಂದರು.
ಮಾಜಿ ಶಾಸಕ ಅರವಿಂದ ಪಾಟೀಲ, ಕಾರ್ಯದರ್ಶಿ ಅಭಯ ಜೋಶಿ, ದಿನೇಶ ಕಾಳೆ, ಅಜಯ ಹೆಡಾ, ಅಮಿತ ಪಾಟೀಲ, ಸಂತೋಷ ಗವಳಿ, ಕಿರಣ ಬೆನಕಟ್ಟಿ, ಅಭಿನಂದನ ಧರಶೆಟ್ಟಿ, ಪ್ರಸನ್ನ ದೊಡಮನಿ, ಅಭಯ ಶಿಂಧೆ,‌ ದಾಮೋದರ ಮಾದವ, ಶಕೀಲ್ ಶೇಖ‌ ಅಲಿ, ವಿಠ್ಠಲ್ ಮಾಳಿ, ವಿದ್ಯಾ ಮುರಕುಂಬಿ‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

error: Content is protected !!