23/12/2024

IMG 20240221 WA0004 3 -

ಬೆಳಗಾವಿ-04: ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ ಸಂಸ್ಥೆಯ 18 ನೇ ಫೌಂಡೇಶನ ದಿನಾಚರಣೆಯನ್ನು ಇದೇ ಮಾರ್ಚ 17 ರಂದು ಬೆಳಗಾವಿಯ ಮಿಲೆನಿಯಂ ಗಾರ್ಡನದಲ್ಲಿ ನಡೆಯಲಿದೆ. ಈ ಫೌಂಡೇಶನ ದಿನಾಚರಣೆ ಅಂಗವಾಗಿ ಜೈನ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಈ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಿ ಮಹನೀಯರನ್ನು ಗೌರವಿಸಲಾಗುವುದು. ಯಶಸ್ವಿ ಉದ್ಯಮಿ ಪ್ರಶಸ್ತಿ, ಶಿಕ್ಷಕ ಪ್ರಶಸ್ತಿ, ಸಮಾಜ ಸೇವಕ ಪ್ರಶಸ್ತಿ, ಕಲೆ ಮತ್ತು ಸಾಹಿತ್ಯ ಕ್ಷೇತ್ರದ ಪ್ರಶಸ್ತಿ, ಯುವ ಸಾಧಕ ಪ್ರಶಸ್ತಿ, ಅತ್ಯುತ್ತಮ ಕೃಷಿಕ ಅಥವಾ ರೈತ ಪ್ರಶಸ್ತಿ, ಹೀಗೆ ಒಟ್ಟು 6 ಪ್ರಶಸ್ತಿಗಳನ್ನು ವಿತರಿಸಲಾಗುವುದು.
ಈ ಪ್ರಶಸ್ತಿಗಳಿಗಾಗಿ ಸಂಘ ಸಂಸ್ಥೆಗಳು ಅರ್ಹ ಮಹನೀಯರ ಶೀಫಾರಸ್ಸು ಮಾಡಬಹುದು. ಅದಲ್ಲದೇ ಪ್ರಶಸ್ತಿಗಾಗಿ ಸ್ವಯಂ ಅರ್ಜಿಯನ್ನು ಸಹ ಸಲ್ಲಿಸಬಹುದು. ಮಾರ್ಚ 12 ರೋಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರಾಜೇಶ ಭೋಸಗಿ ಮೊ:8762484801 ಹಾಗೂ ಉಮೇಶ ನರಸಗೌಡಾ 9035187431 ಇವರನ್ನು ಸಂಪರ್ಕಿಸಬಹುದಾಗಿದೆ ಅಥವಾ ಜಿತೋ ಕಾರ್ಯಾಲಯ ಖಾನಾಪೂರ ರಸ್ತೆ ಉದ್ಯಮಬಾಗ ಇಲ್ಲಿ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!