23/12/2024
IMG20240304181940~2
IMG 20240221 WA0004 3 -ಬೆಳಗಾವಿ-04: ಇದೇ ತಿಂಗಳ 11ರಂದು ಸಂಜೆ 4 ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರಿಗೆ ಸಮಸ್ತ ಲಿಂಗಾಯಿತ ಸಂಘಟನೆಗಳ ಪರವಾಗಿ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ
ಸನ್ಮಾನವನ್ನು ಏರ್ಪಡಿಸಲಾಗಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಶ್ರೀ
ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.
ಸನ್ಮಾನ ಸಮಾರಂಭದ ಪೂರ್ವಭಾವಿ ಸಭೆಯಲ್ಲಿಂದು ಮಾತನಾಡಿದ ಅವರು ವಿಶ್ವಗುರು ಬಸವಣ್ಣನವರನ್ನು
ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಸಮಾಜದ
ಪರವಾಗಿ ಸತ್ಕರಿಸಲಾಗುತ್ತಿದೆ ಈ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳ ಎಲ್ಲ ತಾಲೂಕುಗಳ ಬಸವ
ಅಭಿಮಾನಿಗಳು ಆಗಮಿಸಲಿದ್ದಾರೆ ಎಂದವರು ಹೇಳಿದರು.
ಲಿಂಗಾಯತ ಸಂಘಟನೆಯ ಅಧ್ಯಕ್ಷ ಬಸವರಾಜ ರೊಟ್ಟಿ ಅವರು ಮಾತನಾಡಿ ಪರಸ್ಥಳಗಳಿಂದ
ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ಶರಣ ಬಂಧುಗಳಿಗೆ ಉಪಹಾರ ಮತ್ತು ಪ್ರಸಾದ ವ್ಯವಸ್ಥೆ
ಮಾಡಲಾಗುತ್ತಿದೆ, ಕೆಲವು ಕಡೆ ವಾಹನಗಳ ವ್ಯವಸ್ಥೆಯನ್ನು ಮಾಡಲು ಪ್ರಯತ್ನಿಸಲಾಗುತ್ತಿದೆ
ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಲಿಂಗಾಯಿತ ಸಂಘಟನೆಗಳ ಮುಖಂಡರುಗಳಾದ ಡಾ.ಎಸ್. ಎಂ
ದೊಡ್ಡಮನಿ ,ಆನಂದ ಗುಡಿಸಿ ,ಎಸ್ ವೈ ಹಂಜಿ, ಚಂದ್ರಶೇಖರ್ ಗುಡಿಸಿ,  ಬಿ. ಎಂ ಚಿಕ್ಕನಗೌಡರ,
ಶ್ರೀಮತಿ ನೈನಾ ಗಿರಿಗೌಡರ್, ಬಿ.ಡಿ ಪಾಟೀಲ್, ಎಸ್. ಜಿ ಸಿದ್ದನಾಳ್, ಮುರಿಗೆಪ್ಪ ಬಾಳಿ ,
ಮಹಾನಂದ
ಪರುಶೆಟ್ಟಿ, ಮತ್ತು ಕಾರ್ಯಕ್ರಮವನ್ನು ನಿರ್ವಹಿಸಿ ಸ್ವಾಗತಿಸಿ ಹೊಂದಿಸಿದ ಸಿಎಂ ಬೂದಿಹಾಳ
ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
error: Content is protected !!