ಬೆಳಗಾವಿ-04:ರಾಜ್ಯ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಫೇ24 ರಂದು ದೇಶದ್ರೋಹಿ ಘೋಷಣೆ ಕೂಗಿರುವದು ಎಫ್.ಎಸ್.ಎಲ್.ವರದಿಯಲ್ಲಿ ಖಚಿತವಾದರೆ ನಿರ್ದಾಕ್ಷಣಿಯ ಲ್ರಮ ತಗೆದುಕೊಳ್ಳುತ್ತೆವೆ ಎಂದು ಹೇಳಿರುವ ಮುಖ್ಯ ಮಂತ್ರಿಗಳು ರಾಜ್ಯ ಸಭಾ ಸದಸ್ಯರಾಗಿರುವ ನಸೀರ ಹುಸೆನರ ಸದಸ್ಯತ್ವ ರದ್ದುಗೊಳಿಸಿ ದೇಶಪ್ರೇಮ ಮೆರೆಯಲೆಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಆಗ್ರಹಿಸಿದ್ದಾರೆ.
ಸೊಮವಾರ ಮಾಧ್ಯಮ ಪ್ರಕಟಣೆ ಮುಲಕ ತಿಳಿಸಿದ ಅವರು, ಎಫ್.ಎಸ್.ಎಲ್.ವರದಿಯಲ್ಲಿ ದೇಶದ್ರೋಹದ ಘೋಷಣೆ ದೃಡಪಟ್ಟ ಹಿನ್ನಲೆಯಲ್ಲಿ ದೆಹಲಿ ಮೂಲದ ಇಲ್ತಾಜ್, ಬೆಂಗಳೂರು ಆರ್.ಟಿ.ನಗರದ ಮುನಾವರ, ಹಾವೇರಿಯ ಬ್ಯಾಡಗಿಯ ಮಹಮ್ಮದ ಶಫಿ ನಾಶಿಪುಡಿಯನ್ನು ಬಂಧಿಸಿರುವ ವಿಷಯ ಬಹಿರಂಗ ಪಡಿಸಿದ ಬೆಂಗಳೂರು ಕೇಂದ್ರ ಡಿಸಿಪಿ ಶೇಖರ ಎಚ್.ಟಿ ತಂಡದ ಕಾರ್ಯ ಹಾಗೂ ಈ ಸತ್ಯವನ್ನ ನಾಡಿನ ಜನತೆಗೆ ಬಿತ್ತರಿಸಿದ ರಾಜ್ಯ ಮಾಧ್ಯಮದ ಮಿತ್ರರ ಕಾರ್ಯ ಶ್ಲಾಘನೀಯವಾಗಿದ್ದು, ರಾಜ್ಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸತ್ಯವನ್ನು ತಿಳಿಸುವ ಪೋಷ್ಟ ಹಾಕಿದರೆ ದೂರು ದಾಖಲಿಸುವ ಸರ್ಕಾರ, ದೇಶ ದ್ರೋಹದ ಪ್ರಕರಣದಲ್ಲಿ ಕಟ್ಟುನಿಟ್ಟಿನ ಕ್ರಮ ತಗೆದುಕೊಂಡು ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಸರಿ ದಾರಿಗೆ ತರಬೇಕು. ದೇಶದ್ರೋಹಿಗಳ ಜೋತೆಗೂಡಿ ಮಾಧ್ಯಮದವರ ಮೇಲೆ ದಬ್ಬಾಳಿಕೆ ಮಾಡಿರುವ ರಾಜ್ಯ ಸಭಾ ಸದಸ್ಯ ನಾಸೀರ ಹುಸೆನರ ಸದಸ್ಯತ್ವ ರದ್ದುಗೋಳಿಸಬೇಕೆಂದು ಆಗ್ರಹಿಸಿದ್ದಾರೆ.