23/12/2024
IMG-20240304-WA0070

IMG 20240221 WA0004 3 -

ಬೆಳಗಾವಿ(ಬೆಂಗಳೂರು)-04: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬಂಧಿಸಿದ ತಕ್ಷಣ ನ್ಯಾಯ ಸಿಕ್ಕಿದಂತಲ್ಲ. ದೇಶದ್ರೋಹಿಗಳೆಲ್ಲರನ್ನೂ ಬಂಧಿಸಬೇಕು. ಇವರ ಹಿನ್ನೆಲೆ ಏನು? ವಿಧಾನಸೌಧದ ಒಳಗೆ ಘೋಷಣೆ ಕೂಗಲು ಪ್ರಚೋದನೆ ಕೊಟ್ಟವರು ಯಾರು? ಇವರ ಜೊತೆ ಯಾರೆಲ್ಲ ಸಂಪರ್ಕದಲ್ಲಿ ಇದ್ದಾರೆ ಎಂಬುದನ್ನು ಮುಖ್ಯಮಂತ್ರಿ ಮತ್ತು ರಾಜ್ಯ ಸರಕಾರವು ರಾಜ್ಯದ ಜನತೆಗೆ ಮುಂದಿನ ದಿನಗಳಲ್ಲಿ ತಿಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದರು.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿಪಕ್ಷಗಳ ಒತ್ತಾಯಕ್ಕೆ ಮಣಿದು 3 ಜನರನ್ನು ಬಂಧಿಸಿದ ಮಾಹಿತಿ ಲಭಿಸಿದೆ. ಖಾಸಗಿ ಎಫ್‍ಎಸ್‍ಎಲ್ ವರದಿ ಮೂರು ದಿನಗಳಿಂದ ಹರಿದಾಡುತ್ತಿದೆ. ಅಧಿಕೃತ ಎಫ್‍ಎಸ್‍ಎಲ್ ವರದಿ ಲಭಿಸಿದ್ದರೂ ಕೂಡ ಅದನ್ನು ಬಹಿರಂಗಪಡಿಸದೆ ವಿಳಂಬ ಮಾಡಲಾಗಿತ್ತು ಎಂದು ಆಕ್ಷೇಪಿಸಿದರು.
ಇವರನ್ನು ಕೇವಲ ನಾಮಕಾವಾಸ್ತೆ ಬಂಧಿಸಿ ಒಳಗೆ ರಾಜಾತಿಥ್ಯ ಕೊಡುವ ಬದಲು ಸತ್ಯ ಏನೆಂದು ಸರಕಾರ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರು ಅಮಾಯಕರು ಎಂದು ನಿಮ್ಮ ಶಾಸಕರು, ಸಚಿವರು ಒತ್ತಾಯ ತರಬಹುದು. ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಂಥ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಬಿಜೆಪಿ ಪರವಾಗಿ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಬೆಳಗಾವಿ ಗ್ರಾಮೀಣ ಅಧ್ಯಕ್ಷ ಸುಭಾಷ್ ಪಾಟೀಲ್, ನಗರ ಅಧ್ಯಕ್ಷರಾದ ಗೀತಾ ಸುತಾರ, ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ,‌ಮಾಜಿ‌ ಶಾಸಕ‌ ಸಂಜಯ ಪಾಟೀಲ‌‌ ಮುಂತಾದವರು ಉಪಸ್ಥಿತರಿದ್ದರು.

 

 

error: Content is protected !!