ಬೆಳಗಾವಿ-03:ಎಲ್ಲರೂ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ. ಸಮಾಜ ಕಟ್ಟುವ ಕಾಯಕಕ್ಕೆ ಕೈಜೋಡಿಸಿ. ನಿಷ್ಠೆಯಿಂದ ಕಾಯಕ ಮಾಡಿ. ಕನ್ನಡದ ಜೊತೆಗೆ ಎಲ್ಲ ಭಾಷೆಗಳನ್ನೂ ಕಲಿಯಿರಿ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಹೇಳಿದರು.
ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಸರಕಾರಿ ಮುಸ್ಲಿಂ ನೌಕರರ ಮಹಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಇವತ್ತಿನ ಯುವ ಪೀಳಿಗೆ ತಮ್ಮ ಮಾತೃಭಾಷೆಯ ಜೊತೆಗೆ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ ಸೇರಿದಂತೆ ಇತರೆ ಭಾಷೆ ಕಲಿಯುವುದರಿಂದ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಭಾಷೆಗಳು ಸಹಾಯವಾಗಲಿವೆ ಆದ್ದರಿಂದ ಹೆಚ್ಚಿನ ಭಾಷೆಗಳನ್ನು ಕಲಿಯಲು ಪ್ರಯತ್ನಿಸಿ ಎಂದು ತಿಳಿಸಿದರು.
ಕಾಯಕದಲ್ಲಿ ಮೇಲು–ಕೀಳು ಇಲ್ಲ. ನಮ್ಮ ಪಾಲಿನ ಕಾಯಕ ನಿಷ್ಠೆಯಿಂದ ಮಾಡಬೇಕು. ವೃತ್ತಿ ಕೌಶಲ್ಯ ಅಭಿವೃದ್ಧಿಗೆ ರಾಜ್ಯ ಸರಕಾರ ರೂಪಿಸಿದ ವಿವಿಧ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
ದೇಶದ ಸಂವಿಧಾನದ ಅಶೋತ್ತರಗಳು ಜನರಿಗೆ ತಿಳಿಯುವ ಕೆಲಸವಾಗಬೇಕಿದೆ ಆ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಂಡು ಹೋಗುವುದರ ಜೊತೆಗೆ ನಿಮ್ಮ ಸಂಘಟನೆಯನ್ನು ಸಹ ಒಗ್ಗಟ್ಟಿನಿಂದ ಬೆಳೆಸಿ.ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಆಶ್ವಾಸನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ ನೀವು ಸರಿಯಾಗಿ ಕಾಯಕ ಮಾಡದಿದ್ದರೆ, ಸರಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿ. ಸಂಘಟನೆಯಲ್ಲಿ ರಾಜಕೀಯ ತರಬೇಡಿ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರಕಾರ ಸದಾ ಬದ್ಧ’ ಎಂದರು
ಕೋಟ್
ಒಪಿಎಸ್ ಜಾರಿಗೊಳಿಸುತ್ತೇವೆ: ಹೆಬ್ಬಾಳಕರ
ನಿಮ್ಮ ಬೇಡಿಕೆಯಂತೆ, ರಾಜ್ಯ ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಲಕ್ಷ್ಮಿ ಹೆಬ್ಬಾಳಕರ ಭರವಸೆ ನೀಡಿದರು.
ಶಾಸಕ ಆಸೀಫ್ ಸೇಠ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಫಿರೋಜ್ ಸೇಠ್, ಸಂಘದ ರಾಜ್ಯ ಘಟಕದ ಅಧ್ಯಕ್ಷ ಮೊಹಮ್ಮದ್‌ಸಲೀಮ್ ಹಂಚಿನಮನಿ, ಗೌರವಾಧ್ಯಕ್ಷ ಮೊಹಮ್ಮದ್‌ರಫಿ ಪಾಷಾ, ಪ್ರಧಾನ ಕಾರ್ಯದರ್ಶಿ ಸಯ್ಯದ್ ಇಸ್ಮಾಯಿಲ್ ಪಾಷಾ, ಅನ್ವರ್ ಲಂಗೋಟಿ, ಸಲೀಮ್ ನದಾಫ್, ಅಬ್ದುಲ್‌ಖಾದರ್ ಮೆಣಸಗಿ, ಮೊಹಮ್ಮದ್ ಇಕ್ಬಾಲ್ ಅಮ್ಮಿನಭಾವಿ, ಆಸೀಫ್ ಅತ್ತಾರ, ಎ.ಬಿ.ಹಕೀಮ್, ಶಬ್ಬೀರ್‌ಅಹಮ್ಮದ್ ತಟಗಾರ, ಎಂ.ಎಲ್.ಜಮಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.