ಬೆಳಗಾವಿ-03:ಕುಂದಾನಗರಿ ಬೆಳಗಾವಿಯ ವೆಲ್ ಕಮ್ ಐಟಿಸಿ ಹೋಟೆಲ್ ನಲ್ಲಿ ಮಾರ್ಚ್ 4 ರಂದು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಬೆಳಗಾವಿ, ಚಿಕ್ಕೋಡಿ, ವಿಜಯಪುರ ಮತ್ತು ಬಾಗಲಕೋಟೆ ಲೋಕಸಭೆ ಕ್ಷೇತ್ರಗಳ ಕೋರ್ ಕಮಿಟಿ ಸಭೆ ನಡೆಯಲಿದೆ ಎಂದು ಬಿಜೆಪಿ ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಶಾಸಕರು, ಮುಖಂಡರು, ಇದರಲ್ಲಿ ಪಾಲ್ಗೊಳ್ಳುಲಿದ್ದಾರೆ ಎಂದು ತಿಳಿಸಿದರು.ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ. ಅನಿಲ ಬೆನಕೆ, ಸಂಜಯ ಪಾಟೀಲ,ಮೇಯರ ಸವಿತಾ ಕಾಂಬಳೆ, ಉಪಮೇಯರ ಆನಂದ ಚೌವಾನ, ಸೇರಿದಂತೆ ಇತರರಿದ್ದರು.