ಬೆಳಗಾವಿ-03: ಶನಿವಾರ ಮಾರ್ಚ. ೨ರಂದು ಸಾಯಂಕಾಲ ಭರತೇಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭರತೇಶ ಶೀಕ್ಷಣ ಸಂಸ್ಥೆಯ ಉಪಾಧ್ಯಕ್ಷ ದಿವಂಗತ ರಾಜೀವ ದೊಡ್ಡಣ್ಣವರ ಅವರ ಪ್ರಥಮ ಪುಣ್ಯ ಸ್ಮರಣೆಯನ್ನು ಸ್ವರ ಶೃದ್ದಾಂಜಲಿ ಮೂಲಕ ಶೃದ್ದಾಂಜಲಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಭರತೇಶ ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾಲ ಖೇಮಲಾಪೂರೆ, ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಹೋಮಿಯೋಪೆಥಿಕ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶ್ರೀಕಾಂತ ಕೊಂಕಣಿ ಹಾಗೂ ಡಿ.ವೈ ಚೌಗುಲೆ ಭರತೇಶ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್.ಎನ್,.ಅಕ್ಕಿ , ಸ್ವಾತಿ ಜೋಗ ಅವರು ಮಾತನಾಡಿ ದಿ. ರಾಜೀವ ದೊಡ್ಡಣ್ಣವರ ಅವರ ವ್ಯಕ್ತಿತ್ವವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಕೆ.ಎಲ್.ಇ. ಸ್ಕೂಲ ಆಫ್ ಮ್ಯೂಸಿಕನ ಡಾ.ರಾಜೇಂದ್ರ ಭಂಢಾರಕರ, ಮತ್ತು ಸಂಗಿತ ವಿಭಾಗದ ಡಾ.ರಾಜಾರಾಮ ಅಂಬರಡೇಕರ, ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಬೋದಕ ವೃಂದ ಹಾಗೂ ಸಿಬ್ಬಂದಿ ವರ್ಗ ಮತ್ತು ರಾಜೀವ ದೊಡ್ಡಣ್ಣವರ ಅವರ ಅಭಿಮಾನಿಗಳು ಹಾಜರಿದ್ದರು.