23/12/2024
IMG-20240302-WA0062

IMG 20240221 WA0004 3 -

ಬೆಳಗಾವಿ-02 : ಜಾತಿ ಮತ ಪಂಥಗಳನ್ನು ಮೀರಿ ರಾಷ್ಟ್ರೀಯತೆ, ರಾಷ್ಟ್ರದ ಸಮಗ್ರತೆ, ಅಭಿವೃದ್ಧಿ ಪರವಾದ ಕಾರ್ಯಗಳನ್ನು ಮಾಡುತ್ತ ಭಾರತಕ್ಕೆ ಜಗದ್ಗುರು ಸ್ಥಾನ ತಂದುಕೊಡಲು ಹಗಲಿರುಳು ಶ್ರಮಿಸುತ್ತಿರುವ ನೆಚ್ಚಿನ ಪ್ರದಾನಿ ನರೇಂದ್ರ ಮೊದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡಲು ಕಾರ್ಯಕರ್ತರು ಅವಿರತ ಶ್ರಮವಹಿಸಬೇಕೆಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವಥನಾರಾಯಣ ಹೇಳಿದರು.
ಸಮೀಪದ ಮುತಗಾ ಗ್ರಾಮದಲ್ಲಿ ಜಿಲ್ಲಾ ಹಿಂದುಳಿದ ಮೊರ್ಚಾ ಅಧ್ಯಕ್ಷ ಉಮೇಶ ಪೂರಿಯವರ ಮನೆಯಲ್ಲಿ ಆಯೊಜಿಸಿದ್ದ ಉಪಹಾರ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ದೇಶ ಕಳೆದ 10 ವರ್ಷದಲ್ಲಿ ಪ್ರಪಂಚವೆ ಬೆರಗಾಗುವ ಮಟ್ಟಕ್ಕೆ ಅಭಿವೃದ್ಧಿಯನ್ನು ಸಾಧಿಸಿದೆ. ಮನೆ ಮನೆಗೆ ಕುಡಿಯುವ ನೀರು, ತ್ರಿ ತಲಾಕ ರದ್ದತಿ, ಜಮ್ಮು ಕಾಶ್ಮೀರ ಆರ್ಟಿಕಲ್ 370 ರದ್ದುಗೊಳಿಸಿ ಶತಮಾನಗಳ ಹೋರಾಟ ರಾಮ ಮಂದಿರ ನಿರ್ಮಾಣ, ಉಜ್ವಲಾ ಗ್ಯಾಸ ಸಂಪರ್ಕ, ಸ್ಟಾರ್ಟಪ್ ಇಂಡಿಯಾ, ಮೆಕ್ ಇನ್ ಇಂಡಿಯಾ, ವಿಶ್ವಕರ್ಮ ಯೋಜನೆ, ಸ್ವನಿಧಿ ಹೀಗೆ ನೂರಾರು ಯೋಜನೆ ನೀಡಿ ಭಾರತವನ್ನು ಸ್ವಾವಲಂಬನೆ ಮಾಡುವದರೊಂದಿಗೆ ರಪ್ತು ಮಾಡುವ ದೇಶವಾಗಿ ಹೊರಹೊಮ್ಮಿದೆ‌ ರಕ್ಷಣಾ ಹಾಗೂ ಅರ್ಥಿಕ ಕ್ಷೇತ್ರಗಳಲ್ಲಿ ಬಲಿಷ್ಠ ರಾಷ್ಟ್ರವನ್ನು ಮೀರಿಸುತ್ತಿದೆ. ಶತೃರಾಷ್ಟಗಳ ಬಯೊತ್ಪಾದನಾ ಕೃತ್ಯಗಳಿಗೆ ಆ ದೇಶದ ಒಳಗೆ ನುಗ್ಗಿ ಶತೃಗಳನ್ನು ದ್ವಂಸ ಮಾಡಿದ ಕಿರ್ತಿ ಬಿಜೆಪಿ ಸರಕಾರಕ್ಕೆ ಸಲ್ಲುತ್ತದೆ ಎಂದರು.
ಜಿಲ್ಲಾ ವೈದ್ಯಕೀಯ ಪ್ರಕೊಷ್ಟಾದ ಸಂಚಾಲಕ ಡಾ‌.ಗುರು ಕೋತಿನ‌ ಮಾತನಾಡಿ, ಬೆಳಗಾವಿ ಮತ್ತು ಚಿಕ್ಕೋಡಿಯ ಲೊಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಖಚಿತ ಆದರೆ ಪಕ್ಷದಲ್ಲಿ ಇರಲಾರದ ಜನಸಾಮನ್ಯರಿಗೆ ಬೆಟ್ಟಿಯಾಗದ ನಾಯಕರಿಗೆ ಟಿಕೆಟ್ ಕೊಡದೆ ಸಾಮನ್ಯರ ಜೋತೆಗೂಡಿ ಕೆಲಸ ಮಾಡುವದರೊಂದಿಗೆ ಪಕ್ಷ ಬೆಳೆಸುವವರಿಗೆ ಟಿಕೆಟ್ ನೀಡಬೇಕೆಂದು ವಿನಂತಿಸಿದರು.
ರಾಜ್ಯ ಮಾಧ್ಯಮ ಸಮಿತ ಸದಸ್ಯ ಎಫ್.ಎಸ್.ಸಿದ್ದನಗೌಡರ, ರಾಜ್ಯ ಸಾಮಾಜಿಕ ಜಾಲತಾಣದ ನೀತಿನ ಚೌಗಲೆ, ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ, ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ದೀಶಾ ಸಮಿತಿ ಸದಸ್ಯ ರಾಜು ದೇಸಾಯಿ, ಸಂತೋಷ ದೇಶನೂರ, ವೀರಭದ್ರ ಪೂಜಾರಿ ಹಾಗೂ ನುರಾರು ಕಾರ್ಯಕರ್ತರು ಇದ್ದರು.
ಇದೆ ಸಂದರ್ಭದಲ್ಲಿ ಉಮೇಶ ಪೂರಿ, ದೀಪಕ ಪೂರಿ ಕುಟುಂಬ ಹಾಗೂ ಜಿಲ್ಲಾ ಓಬಿಸಿ ಮೋರ್ಚಾ ಪದಾಧಿಕಾರಿಗಳು ರಾಜ್ಯ ಮುಖ್ಯವಕ್ತಾರರನ್ನು ಸತ್ಕರಿಸಿದರು.

error: Content is protected !!