23/12/2024

IMG 20240221 WA0004 3 -

ಬೆಳಗಾವಿ 03: ನಾಡಹಬ್ಬ ಉತ್ಸವ ಸಮಿತಿ ಬೆಳಗಾವಿ ಹಾಗೂ ಪ್ರಹ್ಲಾದ ಪ್ರಕಾಶನ ಬೆಳಗಾವಿ ಇವರ ನೇತೃತ್ವದಲ್ಲಿ ಡಾ. ಸಿ. ಕೆ. ಜೋರಾಪೂರ ಅವರು ಬರೆದ “ಕರ್ನಾಟಕದ ಇತಿಹಾಸ – ಒಂದು ಇಣುಕು ನೋಟ” ಗ್ರಂಥ ಇಂದು ದಿನಾಂಕ ಮಾ.3ರಂದು ಇಳಿಹೊತು 3:30ಕ್ಕೆ ಎಸ್‌.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಗ್ರಹ ಶಿವಬಸವನಗರ, ಬೆಳಗಾವಿಯಲ್ಲಿ ಬಿಡುಗಡೆ ಹಾಗೂ ಸತ್ಕಾರ ಸಮಾರಂಭ ನಡೆಯಲಿದೆ.

ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಪೂಜ್ಯ ಡಾ. ಸಿದ್ಧರಾಮ ಸ್ವಾಮಿಗಳು, ಪೂಜ್ಯ ಡಾ. ಅಲ್ಲಮಪ್ರಭು ಸ್ವಾಮಿಗಳು, ಪೂಜ್ಯ ಗುರುಸಿದ್ಧ ಸ್ವಾಮಿಗಳು ವಹಿಸಲಿದ್ದಾರೆ. ಕೃತಿ ಬಿಡುಗಡೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಅನಿಲ ಬೆನಕೆ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ನಿರ್ದೇಶಕರಾದ ಡಾ. ಸತೀಶಕುಮಾರ ಹೊಸಮನಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೆ.ಎಲ್‌.ಇ. ನಿರ್ದೇಶಕರು, ನಾಡಹಬ್ಬ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಹೆಚ್‌. ಬಿ. ರಾಜಶೇಖರ ಮತ್ತು ಗೌರವ ಉಪಸ್ಥಿತರಾಗಿ ಸಾಹಿತಿ ಡಾ. ಬಸವರಾಜ ಜಗಜಂಪಿ, ಹಿರಿಯ ಪತ್ರಕರ್ತರರಾದ ಎಲ್‌.ಎಸ್‌. ಶಾಸ್ತ್ರಿ, ಖ್ಯಾತ ವಕೀಲರು, ರಾಜಕೀಯ ಧುರೀಣರಾದ ಎಂ.ಬಿ. ಝಿರಲಿ ವಹಿಸಲಿದ್ದಾರೆ.
ಕೃತಿ ಪರಿಚಯವನ್ನು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ರಾಧಾ ಜಿ. ಆರ್‌. ಮತ್ತು ಯುವ ರಾಜಕೀಯ ಧುರೀಣರಾದ ಮಹಾಂತೇಶ ವಕ್ಕುಂದ ಮಾಡಲಿದ್ದಾರೆ.
ಕೃತಿಯು ಮೌರ್ಯರು, ಶಾತವಾಹನರು, ಕದಂಬ-ಗಂಗರು, ವಾತಾಪಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರ್ಯರು, ಹೊಯ್ಸಳರು, ಸೇವುಣರು, ವಿಜಯನಗರ ಅರಸರು, ಬಹಮನಿ ಸುಲ್ತಾನರು, ಮೈಸೂರು ಯಲಹಂಕದ ಪ್ರಭುಗಳು, ಕೆಳದಿ ನಾಯಕರು, ಚಿತ್ರದುರ್ಗದ ನಾಯಕರು, ಬೆಳವಡಿ ಮಲ್ಲಮ್ಮ, ಕಿತ್ತೂರ ಸಂಸ್ಥಾನದ ಕಲಿಗಳು ಹೀಗೆ ಇವೆಲ್ಲವುಗಳನ್ನೊಳಗೊಂಡ ಇತಿಹಾಸದ ಕೃತಿಯು ಶ್ರೀಗಳ ಮತ್ತು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳ್ಳಲಿದೆ.

error: Content is protected !!