ಬೆಳಗಾವಿ-02:ಎಂ.ಎಸ್ ಬಿರಾದಾರ್ ಪಾಟೀಲ್ ಅವರು ಗುತ್ತಿಗೆದಾರ ರೊಬ್ಬರಿಗೆ ಜಿಪಂ ಎಇಇ ಎಂ.ಎಸ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕಾರ್ಯನಿರತ ಗುತ್ತಿಗೆದಾರರ ಸಂಘದ ವತಿಯಿಂದ ಶನಿವಾರ ಇಲ್ಲಿನ ಜಿ.ಪಂ. ಕಚೇರಿ ಎದರು ದಿಢೀರ್ ಪ್ರತಿಭಟನೆ ನಡೆಸಿ ಜಿಪಂ ಎಇಇ ಎಂ.ಎಸ್ ಬಿರಾದಾರ್ ಪಾಟೀಲ್ ಅವರನ್ನು ಅಮಾನತ್ತು ಗೊಳಿಸುವಂತೆ ಜಿ.ಪಂ.ಸಿಇಒ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಳಗಾವಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಗುತ್ತಿಗೆದಾರ
ಅಡಿವೆಪ್ಪ ತವಗದ 10 ಲಕ್ಷ ರೂ. ಕಾಮಗಾರಿ ಕೈಗೊಂಡಿದ್ದರು. 2022 ರಲ್ಲಿ ಕಾಮಗಾರಿ ಪೂರ್ಣಗೊಂಡರೂ ಜಿ.ಪಂ. ಅವರು ಬಿಲ್ ಬಾಕಿ ಉಳಿಸಿಕೊಂಡಿದ್ದರು.
ಬಿಲ್ ಬಿಡುಗಡೆಗೆ ಜಿಪಂ ಎಇಇ ಎಂ.ಎಸ್ ಬಿರಾದಾರ್ ಪಾಟೀಲ ಅವರನ್ನು ಸಹಿ ಮಾಡಿಯಾಲು ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೊತೆಗೆ ಸಹಿ ಮಾಡೋಕೆ ಆಗುವುದಿಲ್ಲ ಏನು ಮಾಡ್ತಿಯೋ ಮಾಡಿಕೊ ಎಂದು ಅಧಿಕಾರಿ ಆವಾಜ್ ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ ಕೂಡಲೇ ಸೇವೆಯಿಂದ ಅಮಾನತ್ತು ಮಾಡುವಂತೆ ಆಗ್ರಹಿಸಿದರು.