ಬೆಳಗಾವಿ; ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು ಹಾಗೂ ಜಿಲ್ಲಾ ಘಟಕ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಮಾ. 3 ರಂದು ಬೆಳಗಾವಿಯ ಸನ್ಮಾನ ಹೋಟೆಲ್ ಹತ್ತಿರದ ಗಾಂಧಿ ಭವನದಲ್ಲಿ ಬೆಳಿಗ್ಗೆ 10.15 ರಿಂದ ಸಂಜೆ 5 ಗಂಟೆಯವರೆಗೆ ರಾಜ್ಯ ಮಟ್ಟದ ಸರ್ಕಾರಿ ಮುಸ್ಲಿಂ ನೌಕರರ ಮಹಾ ಸಮ್ಮೇಳನ, ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಹಾಗೂ ಶೈಕ್ಷಣಿಕ, ಔದ್ಯೋಗಿಕ ಯೋಜನೆಗಳ ಅರಿವು ಕಾರ್ಯಾಗಾರ ನಡೆಯಲಿದೆ.
ಬೆಂಗಳೂರು ವಿಧಾನ ಸಭೆ ಸಭಾಧ್ಯಕ್ಷರಾದ ಯು.ಟಿ ಖಾದರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಳಗಾವಿ ಉತ್ತರ ವಿಧಾನ ಸಭೆ ಮತ ಕ್ಷೇತ್ರದ ಶಾಸಕರಾದ ಆಸೀಫ್ (ರಾಜು) ಸೇಠ್ ಅವರು ಅಧ್ಯಕ್ಷತೆಯನ್ನು ವಹಿಸಲ್ಲಿದ್ದಾರೆ.
ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ ಜಾರಕಿಹೊಳಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಅಲ್ಪಸಂಖ್ಯಾತರ ಕಲ್ಯಾಣ ವಕ್ಫ ಇಲಾಖೆ ವಸತಿ ಸಚಿವರಾದ ಬಿ ಝೆಡ್ ಜಮೀರ್ ಅಹ್ಮದ್‌ಖಾನ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಪೌರಾಡಳಿತ ಹಾಗೂ ಹಜ್ ಇಲಾಖೆ ಸಚಿವ ರಹೀಮ್ ಖಾನ್, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹ್ಮದ್ ಅವರು ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ.
ಅದೇ ರೀತಿಯಲ್ಲಿ ಮೈಸೂರು ನರಸಿಂಹರಾಜ ಕ್ಷೇತ್ರ ಹಾಗೂ ಮಾಜಿ ಸಚಿವರಾದ ತನ್ವೀರ್ ಸೇಠ್, ಕರ್ನಾಟಕ ಸರ್ಕಾರದ (ನವದೆಹಲಿ) ವಿಶೇಷ ಪ್ರತಿನಿದಿ-2 ಪ್ರಕಾಶ ಹುಕ್ಕೇರಿ. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಶಾಂತಿ ನಗರ ಶಾಸಕಾರದ ಎನ್.ಎ ಹಾರಿಸ್, ರಾಜ್ಯ ಸಭೆ ಸದಸ್ಯರಾದ ಸೈಯ್ಯದ್ ನಾಸಿರ್ ಹುಸೇನ್, ಕರ್ನಾಟಕ ಪವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಕನೀಜ್ ಫಾತಿಮಾ ಅವರು ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ವಿಧಾನ ಪರಿಷತ್ತು ಸಚೇತಕರಾದ ಸಲೀಮ್ ಅಹ್ಮದ್. ಬೆಂಗಳೂರು ಶಿವಾಜಿ ನಗರದ ಶಾಸಕರಾದ ರಿಜ್ವಾನ್. ವಿಧಾನ ಪರಿಷತ್ ಸದಸ್ಯ ಅಬ್ದುಲ್ ಅಜೀಮ್. ರಾಮನಗರ ಶಾಸಕ ಇಕ್ಬಾಲ್ ಹುಸೇನ್. ಬೆಂಗಳೂರು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಅಬ್ದುಲ ಅಜೀಮ. ಬೆಂಗಳೂರು ವಕ್ಫ ಮಂಡಳಿ ಅಧ್ಯಕ್ಷರಾದ ಅನ್ವರ್ ಬಾಷಾ. ಹುಬ್ಬಳ್ಳಿ ಇಸ್ಲಾಂ ಅಂಜುಮನ್ ಸಚಿವ ಅಬ್ದುಲ್ ಹಕೀಮ ಹಿಂಡಸಗೇರಿ ಅವರು ಆಗಮಿಸಲಿದ್ದಾರೆ.
ಕರ್ನಾಟಕ ಸರಕಾರದ ಅಪರ ಕಾರ್ಯದರ್ಶಿಗಳಾದ ಎಲ್.ಕೆ ಅತೀಕ್. ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ಕರ್ನಾಟಕ ಸರಕಾರದ ಆರ್ಥಿಕ ಇಲಾಖೆ ಕಾರ್ಯದರ್ಶಿ, ಡಾ. ಪಿ.ಸಿ ಜಾಫರ. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್. ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ. ಹೆಸ್ಕಾಮ್ ವ್ಯವಸ್ಥಾಪಕ ನಿರ್ದೇಶಕ ರೋಶನ್ ಜಮೀರ್, ತುಮಕೂರು ಪೊಲೀಸ್ ಕಮಾಂಡೆಂಟ್ (ಆರ್.ಪಿ.ಎಫ್) ಹಮಜಾ ಹುಸೇನ್ ದಖನಿ.
ಬೆಂಗಳೂರು ಅಲ್ಪಸಂಖ್ಯಾತರ ನಿರ್ದೇಶನಾಲಯ ನಿರ್ದೇಶಕ ಜಿಲಾನಿ ಮೋಕಾಶಿ. KGS MEWA ಮಾಜಿ ಅಧ್ಯಕ್ಷ ಕೆ ಅಬ್ದುಲ್ ರಹೀಮ್. ಬೆಂಗಳೂರು ಕರ್ನಾಟಕ ಸರಕಾರ (ಕಾನೂನು ವ್ಯವಹಾರಗಳು) ವಾಣಿಜ್ಯ ತೆರಿಗೆಗಳ ಇಲಾಖೆ ಅಪರ ಆಯುಕ್ತ (KSTS) ಮಿರ್ಜಾ ಅಜ್ಮತುಲ್ಲಾ, ಬೆಂಗಳೂರು ಕೆಎಮ್‌ಡಿಸಿ ವ್ಯವಸ್ಥಾಪಕರಾದ ನಜೀರ ಅಹ್ಮದ್. ಇಂಟರ ನ್ಯಾಷನಲ್ ವೆಟ್ ಲಿಪ್ಟಿಂಗ್ ಚಾಂಪಿಯನ್ ಖುದ್ಸಿಯಾ ನಜೀರ್ ಅವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಘಟಕ ಪ್ರಕಟಣೆಯಲ್ಲಿ ಹೇಳಿದ್ದಾರೆ.