ವಿಧಾನ ಪರಿಷತ ಮಾಜಿ ಮುಖ್ಯ ಸಚ್ಚೇತಕ,ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ ಸಹಕಾರಿ ರಂಗದ ಚಳುವಳಿಯಲ್ಲಿ ಕರ್ನಾಟಕ ರಾಜ್ಯದ ಕೊಡುಗೆ ಅಪಾರ ಅದರಲ್ಲೂ ಬೆಳಗಾವಿ ಜಿಲ್ಲೆಯ ಸಹಕಾರಿ ರಂಗ ಬಿಡಿಸಿಸಿ ಬ್ಯಾಂಕ್, ಪಿಕೆಪಿಎಸ್ ಸಂಘಗಳು,ಸಹಕಾರಿ ಸಂಘಗಳು, ಸಹಕಾರಿ ಆಸ್ಪತ್ರೆಗಳು,ಸಹಕಾರಿ ಸಕ್ಕರೆ ಕಾರ್ಖಾನೆಗಳು ,ಅರ್ಬನ್ ಬ್ಯಾಂಕುಗಳು, ಕ್ರೆಡಿಟ್ ಬ್ಯಾಂಕುಗಳು ಇಂದು ಎಷ್ಟು ಮಹತ್ತರ ಕೆಲಸ ಮಾಡುತ್ತಿವೆ ಎಂದರೆ ಸಹಕಾರ ಕ್ಷೇತ್ರದಿಂದ ರೈತರಿಗೆ ಆಗುತ್ತಿರುವ ಅನುಕೂಲಗಳನ್ನು ಪಡೆದ ನಾವು ಶ್ರೇಷ್ಠರು ಎಂದು ಹೇಳಿದರು.ಹಿಂದೆ ರತ್ನಪಣ್ಣಾ ಕುಂಬಾರ,ಅಪ್ಪನಗೌಡ ಪಾಟೀಲ, ಶಾಂತಪ್ಪಣ್ಣ ಮಿರ್ಜಿ,ಬಸವಂತರಾಯ ದೊಡ್ಡಗೌಡರ, ಚಿದಾನಂದ ಕೋರೆ ಅಂತಾ ಮಹಾನ್ ಸಹಕಾರಿ ದುರೀಣರು ಮಾಡಿದ ನಿಸ್ವಾರ್ಥ ಸೇವೆ ಇಂದು ಸಹಕಾರಿ ರಂಗ ಉನ್ನತ ಮಟ್ಟದಲ್ಲಿದೆ. ಇದಕ್ಕೆಲ್ಲ ಕಾರಣ ಇವರೆಲ್ಲರ ಶ್ರಮ ಎಂದರು. ಮುಂದೆ ಹೊಗಳಿ ಹಿಂದೆ ತೆಗಳುವ ಈ ಕಾಲದಲ್ಲಿ 2500 ಕೋಟಿ ರೂಪಾಯಿಗಳ ಅನುಧಾನ ತಂದ ಮಹಾಂತೇಶ ದೊಡ್ಡಗೌಡರ ಅವರನ್ನು ಸೊಲಿಸಿ ಅದರ ಪರಿಣಾಮ ಜನ ಈಗ ಅನುಭವಿಸುತ್ತಿದ್ದಾರೆ.ಆದರೆ ಸೋಲನ್ನು ಸವಾಲಾಗಿ ಸ್ವೀಕರಿಸಿ ಎದೆಗುಂದದೆ ಸೇವೆ,ಸಹಕಾರ,ಸಮಾಜ,ಧಾರ್ಮಿಕ ಅನೇಕ ಕ್ಷೇತ್ರಗಳಲ್ಲಿ ಬೆಂಬಿಡದೆ ಕಾರ್ಯ ಮಾಡುತ್ತಿರುವದು ಬೈಲಹೊಂಗಲ ಮತ್ತು ಕಿತ್ತೂರ ತಾಲ್ಲೂಕಿನ ಸಹಕಾರಿ ಸಂಘಗಳನ್ನು ಬೆಳಸುತ್ತಿರುವದು ಹೆಮ್ಮೆಯ ವಿಷಯ ಅದಕ್ಕಾಗಿ ಮುಂದಿನ 25 ವರ್ಷಗಳ ಕಾಲ ಅಧಿಕಾರ ನಿಮಗೆ ಒಲಿಯಲಿದೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೆಶಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಈ ಒಂದು ಸಂಘ 78 ವರ್ಷಗಳ ಕಾಲ ಅನೇಕ ಮಹನೀಯರು ಶ್ರಮ ವಹಿಸಿ ಕಟ್ಟಿ ಬೆಳೆಸಿದ ಸಂಘ ನನ್ನನ್ನು ಬಿಡಿಸಿಸಿ ಬ್ಯಾಂಕ್ ನಿರ್ದೆಶಕರನ್ನಾಗಿ ಮಾಡಿದೆ .ಅದೇ ಬಿಡಿಸಿಸಿ ಬ್ಯಾಂಕನಿಂದ ಐದು ವರ್ಷಗಳ ಕಾಲ ಚೆನ್ನಮ್ಮನ ಕಿತ್ತೂರ ಕ್ಷೇತ್ರದ ಶಾಸಕನಾಗಿ ಅನೇಕ ಕಾರ್ಯಗಳನ್ನು ಮಾಡಿದೆ. 31 ಹಳ್ಳಿಗಳಿಗೆ ನೀರು ಕಲ್ಪಿಸುವ ಶ್ರೀ ಚನ್ನವೃಷಬೇಂದ್ರ ಏತ ನೀರಾವರಿ ಯೋಜನೆಗೆ ಮಾಜಿ ಸಿ ಎಂ. ಬೊಮ್ಮಾಯಿಯವರಿಂದ ಅನುಮೋಧನೆ ಪಡೆದು ಹಣಕಾಸು ಮಂಜುರಾತಿ ಪಡೆದರೂ ಈಗಿನ ಸರ್ಕಾರ ಕಾರ್ಯ ಕೈಗೆತ್ತಿಕೊಳ್ಳಲಿಲ್ಲ.ಆದರೆ ಪ್ರಸಕ್ತ ಬಜೆಟ್ ನಲ್ಲಿ ಈ ಶ್ರೀ ಚನ್ನವೃಷಬೇಂದ್ರ ಯೋಜನೆಗೆ ಅನುಮೋದನೆ ನೀಡಿದೆ. ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸಿ ನೀರು ಕಲ್ಪಿಸಿದರೆ ರಾಜಕೀಯ ,ಪಕ್ಷ ಬದಿಗೊತ್ತಿ ಸಿ ಎಂ ಸಿದ್ರಾಮಯ್ಯ ಅವರನ್ನು ಅಭಿನಂದಿಸುತ್ತೇನೆ ಎಂದರು .ಈ ಸಂಘದ ಕಟ್ಟಡಕ್ಕೆ ಸದಸ್ಯರಿಂದ ಕಟ್ಟಡ ನಿಧಿ ರೂ.48,00,000/-ಮತ್ತು ಸ್ವಂತ ಸಂಘದ ಬಂಡವಾಳ ರೂ 12,00,000/- ಗಳಿಂದ ಕಟ್ಟಡ ನಿರ್ಮಿಸಿದ್ದು. 8 ಕೋಟಿ ರೂಪಾಯಿ ಇದ್ದ ಪತ್ತನ್ನು 11 ಕೋಟಿ ಹೆಚ್ಚಿಗೆ ಮಾಡಲಾಗಿದ್ದು ಇದರ ಪ್ರಯೋಜನ ರೈತರಿಗೆ ಸಿಗಲಿದೆ ಎಂದರು. ಇದಕ್ಕೆ ಇಲ್ಲಿಯವರೆ ಕಾರ್ಯನಿರ್ವಹಿಸಿದ ಆಡಳಿತ ಮಂಡಳಿ, ಸಿಬ್ಬಂದಿಯ ಪರಿಶ್ರಮ ಕಾರಣ .ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗ್ರಾಮೀಣ ಸಹಕಾರಿ ಸಂಘದ ಮೂಲಕ ರೈತರಿಗೆ ಅನೇಕ ಸವಲತ್ತು ನೀಡಲು ಯೋಜನೆ ಮಾಡಿ ಅನುಧಾನ ನೀಡುತ್ತಿದ್ದು ಅದರ ಉಪಯೋಗ ಪಡೆಯಬೇಕು ಎಂದರು.ಈ ಕಾರ್ಯಕ್ಕೆ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಬಿಡಿಸಿಸಿ ಬ್ಯಾಂಕ್ ಅದ್ಯಕ್ಷ ರಮೇಶ ಕತ್ತಿ ಅವರ ಸಹಕಾರವೇ ಕಾರಣ ಎಂದರು.
ಬೆಳಗಾವಿ ನಾಗನೂರ ರುದ್ರಾಕ್ಷಿ ಮಠದ ಶ್ರೀ ಅಲ್ಲಮ ಪ್ರಭು ಮಹಾಸ್ವಾಮಿಗಳು ಮಾತನಾಡಿ ಸಹಕಾರಿ ರಂಗ ರಾಜಕೀಯಕ್ಕೆ ಅಡಿಪಾಯ ಇದ್ದ ಹಾಗೇ ಇಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿದರೆ ರಾಜಕೀಯ ಯಶಸ್ಸು ಕಾಣುತ್ತದೆ ಎಂದರು.
ಮಾಜಿ ಶಾಸಕ ಜಗದೀಶ ಮೆಟಗುಡ್ ಮಾತನಾಡಿ ರೈತರು ಮೊದಲು 3 ಮತ್ತು 4 ರ ಬಡ್ಡಿ ದರದಲ್ಲಿ ಹಣವುಳ್ಳವರಿಂದ ಸಾಲ ಪಡೆಯುತ್ತಿದ್ದರು ಈ ಪಿಕೆಪಿಎಸ್ ನಿಂದ ಅದು ತಪ್ಪಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಸತೀಶ ಈರಣ್ಣ ಕಡಾಡಿ ಮಾತನಾಡಿ ಗ್ರಾಮೀಣ ಭಾಗದ ರೈತರ ಅಭ್ಯುದಯಕ್ಕೆ ಪ್ರಧಾನಿ ಮೋದಿಯವರು ಪಿಕೆಪಿಎಸ್ ಗಳಲ್ಲಿ 150 ವಸ್ತುಗಳ ವಹಿವಾಟು ಮಾಡಲಿದ್ದಾರೆ. ಗೋದಾಮು,ಕೋಲ್ಡ ಸ್ಟೋರೇಜ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಮತ್ತು ಶೇ 40 ಜನ ಕೃಷಿಯನ್ನು ಅವಲಂಬಿಸಿರುವ ನಮ್ಮ ದೇಶದಲ್ಲಿ ಕೇವಲ 13% ಆರ್ಥಿಕತೆ ಹಿನ್ನಡೆ ಮತ್ತು ಸಣ್ಣ ಹಳ್ಳಿಯಲ್ಲಿ ಮಹಾಂತೇಶ ಅಣ್ಣಾ ದೊಡ್ಡಗೌಡರ ಅಪಾರ ಸಾಧನೆ ಮಾಡಿದ್ದಾರೆ ಎಂದರು.
ಮಾಜಿ ಜಿ ಪಂ ಸದಸ್ಯ ಪೃತ್ವಿ ಕತ್ತಿ ಮಾತನಾಡಿ ಬಿಡಿಸಿಸಿ ಗೆ ರಮೇಶ ಕತ್ತಿ ಅದ್ಯಕ್ಷರಾದ ನಂತರ ಅಡಿಟ್ ಸಿ ಇದ್ದ ಬ್ಯಾಂಕ್ ಇಂದು ‘ಅ’ ವರ್ಗವಾಗಿದ್ದು .ಕೇಂದ್ರ ಸರ್ಕಾರದ ಯೋಜನೆಯಿಂದ ಗ್ರಾಮೀಣ ಸಂಘಗಳು ಸಂಪೂರ್ಣ ಗಣಕೀಕರಣವಾಗಲಿವೆ ಎಂದರು.
ಮಾಜಿ ಶಾಸಕ ಅರವಿಂದ ಪಾಟೀಲ,ಮಲ್ಲಾಪೂರ ಗಾಳೇಶ್ವರ ಮಠದ ಶ್ರೀ ಚಿದಾನಂದ ಶ್ರೀಗಳು , ಯರಗೊಪ್ಪ ಲೀಲಾಮಠದ ಶ್ರೀ ಶಿವಪ್ಪಜ್ಜ, ಬೈಲಹೊಂಗಲ ಸಹಕಾರಿ ಸಂಘಗಳ ನಿಬಂಧಕ ಶ್ರೀಮತಿ ಶಾಹೀನ ಅಕ್ತರ್ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಅದ್ಯಕ್ಷ ಈಶ್ವರ ಮಿಡಕನಟ್ಟಿ, ಗ್ರಾ ಪಂ ಅದ್ಯಕ್ಷರಾದ ಕಸ್ತೂರೆವ್ವ ಕುರುಬರ,ಬಿಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಸುರೇಶ ಅಳಗುಂಡಿ,ಉಪ ಪ್ರಧಾನ ವ್ಯವಸ್ಥಾಪಕ ಎನ್ ಜಿ.ಕಲಾವಂತ,ಬೈಲಹೊಂಗಲ ಟಿ ಎ ಪಿ ಸಿ ಎಮ್ ಎಸ ಅದ್ಯಕ್ಷರಾದ ದೂಳಪ್ಪ ಇಟಗಿ,ಬಿಡಿಸಿಸಿ ಬ್ಯಾಂಕ್ ತಾಲೂಕಾ ನಿಯಂತ್ರಣಾಧಿಕಾರಿ ವ್ಹಿ ಬಿ.ಗಿರನವರ,ನೇಸರಗಿ ಬಿಡಿಸಿಸಿ ಬ್ಯಾಂಕ್ ನಿರೀಕ್ಷಕ ಸುರೇಶ ಮತ್ತಿಕೊಪ್ಪ,ಪಿ ಎಲ್ ಡಿ ಬ್ಯಾಂಕ್ ಅದ್ಯಕ್ಷ ಶಂಕರಗೌಡ ಪಾಟೀಲ, ಬೆಳಗಾವಿ ಜಿಲ್ಲಾ ಬಿಜೆಪಿ ಉಪಾದ್ಯಕ್ಷ ಬಿ ಎಪ್.ಕೊಳದೂರ, ಪಿಕೆಪಿಎಸ್ ವನ್ನೂರ ಅದ್ಯಕ್ಷ ಬಾಬಾಸಾಹೇಬ ದೇಸಾಯಿ, ಸೋಮೇಶ್ವರ ಶುಗರ ನಿರ್ದೆಶಕರಾದ ಪ್ರಕಾಶ ಮೂಗಬಸವ,ಶಂಕರೆಪ್ಪ ಸಿದ್ನಾಳ,ಚಂದರಗಿ ಕ್ರೀಡಾ ಶಾಲೆಯ ಮಾಜಿ ಅದ್ಯಕ್ಷ ರುದ್ರಗೌಡ ಪಾಟೀಲ, ಕಿತ್ತೂರ ಮಂಡಳ ಬಿಜೆಪಿ ಅದ್ಯಕ್ಷ ಬಸವರಾಜ ಪರವಣ್ಣವರ, ರಾಚಪ್ಪ ಕರಿಕಟ್ಟಿ,ನೇಸರಗಿ ಪಿಕೆಪಿಎಸ್ ಅದ್ಯಕ್ಷ ರಾಜಶೇಖರ ಎತ್ತಿನಮನಿ,ಬಸನಗೌಡ ಸಿದ್ರಾಮನಿ, ನಿಂಗನಗೌಡ ದೊಡ್ಡಗೌಡರ,ರಾಮನಗೌಡ ದೊಡ್ಡಗೌಡರ, ಯಲ್ಲನಗೌಡ ದೊಡ್ಡಗೌಡರ,ಡಾ.ಪ್ರಕಾಶ ಹಲ್ಯಾಳ,ಪ್ರದೀಪಗೌಡ ದೊಡ್ಡಗೌಡರ, ಸಂಘದ ಉಪಾದ್ಯಕ್ಷ ರುದ್ರಗೌಡ ಪಾಟೀಲ, ನಿರ್ದೆಶಕರಾದ ಈರಣಗೌಡ ಪಾಟೀಲ, ಅಡಿವಪ್ಪ ಕುಂದರನಾಡ,ಶಿವಪ್ಪ ಕೊಳದೂರ, ಸೋಮಪ್ಪ ಮಲ್ಲಾರಿ,ಹನಮಂತ ಹಳೇಮನಿ,ಶ್ರೀಮತಿ ಸುಜಾತಾ ಶಿ.ಪಾಟೀಲ, ಅನ್ನಪೂರ್ಣ ಶ್ರೀ ಕುಲಕರ್ಣಿ,ಶ್ರೀಮತಿ ಶೋಭಾ ಭದ್ರಿ,ನಾಮದೇವ ಸಿದ್ದಮ್ಮನವರ ,ಕಾರ್ಯನಿರ್ವಾಹಕ ಬಾಬು ಶಿ.ಶೇಬಣ್ಣವರ ಸಿಬ್ಬಂದಿ ಸಿದ್ರಾಮ ಸಾವಳಗಿ,ಮಹೇಶ್ ಶೇಬಣ್ಣವರ,ಬಸಲಿಂಗಪ್ಪ ಕರವೀರನವರ,ಬೈಲಹೊಂಗಲ ಮತ್ತು ಚೆನ್ನಮ್ಮನ ಕಿತ್ತೂರ ತಾಲ್ಲೂಕಿನ ಎಲ್ಲಾ ಪಿಕೆಪಿಎಸ್ ಅದ್ಯಕ್ಷರು,ನಿವೃತ್ತ ಅದ್ಯಕ್ಷರು, ಪದಾಧಿಕಾರಿಗಳು, ಸಹಕಾರಿಗಳ ಸದಸ್ಯರು, ಸಿಬ್ಬಂದಿ, ಮದನಭಾವಿ, ಮುರಕೀಭಾವಿ, ಲಕ್ಕುಂಡಿ ಗ್ರಾಮದ ಹಿರಿಯರು, ಮುಖಂಡರು, ರೈತರು ,ಗ್ರಾಮಸ್ಥರು ಉಪಸ್ಥಿತಿರಿದ್ದರು.