ಬೆಳಗಾವಿ-21: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬೆಳಗಾವಿ ರಿಂಗ್ ರಸ್ತೆ ಹಾಗೂ ಉತ್ತರ ಕರ್ನಾಟಕದ ೮ ಜಿಲ್ಲೆಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪೂಜಾ ಸಮಾರಂಭಕ್ಕೆ ನಾಳೆ ಬೆಳಗಾವಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಮಾರಂಭದ ಪೂರ್ವ ಸಿದ್ಧತೆಗಳನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಯೋಜನಾ ನಿರ್ದೇಶಕ ಭುವನೇಶಕುಮಾರ ಶುಕ್ಲಾ, ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರರಾದ ಅಜೀತ, ಅಜಿಂಕ್ಯಾ, ರಾಜ್ಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಆಯುಕ್ತರಾದ ಬಲರಾಮ ಚೌಹಾಣ್, ಬೆಳಗಾವಿ ಉಪವಿಭಾಗಧಿಕಾರಿ ಬಸವಣೆಪ್ಪ ಕಲ್ಲಶೆಟ್ಟಿ, ಬೆಳಗಾವಿ ತಹಶೀಲ್ದಾರ್ ಬಿಸುಗೆ ಸೇರಿದಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.