23/12/2024
IMG_20240218_110424

ಗೋಕಾಕ: ತಾಲೂಕಿನ ಮರಡಿ ಶಿವಾಪೂರ ಗ್ರಾಮದಲ್ಲಿ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆಯಡಿ 10 ಲಕ್ಷ ರೂ ವೆಚ್ಚದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಗುದ್ದಲಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮಗಳಲ್ಲಿ ಜಾತಿಗೆ ಒಂದೊಂದು ಜಾತ್ರೆಗಳನ್ನು ಮಾಡುವುದನ್ನು ನೋಡಿದ್ದೇವೆ ಆದರೆ ಜನೇವರಿ 22 ರಂದು ಅಯೋಧ್ಯೆಯಲ್ಲಿ ನಡೆದ ಮರ್ಯಾದಾ ಪುರುಷೋತ್ತಮ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಆ ಸಂದರ್ಭದಲ್ಲಿ ಇಡಿ ದೇಶದ ಜನ ತಮ್ಮ ಗ್ರಾಮಗಳ ದೇವಸ್ಥಾನಗಳಲ್ಲಿ ಪೂಜಾ ಕಾರ್ಯ ನೇರವೇರಿಸುವ ಮೂಲಕ ಮತ್ತು ಅದೇ ದಿನ ತಮ್ಮ ಮನೆಯಲ್ಲಿ ದೀಪ ಬೆಳಗಿಸುವ ಮೂಲಕ ಹಬ್ಬದಂತೆ ಎಲ್ಲ ಜಾತಿಯ ಜನ, ಬಡವ ಶ್ರೀಮಂತನೆಂಬ ಯಾವ ಭೇದ ಭಾವನೆ ಬರಲಿಲ್ಲ ಎಲ್ಲರೂ ಸಂತೋಷದಿಂದ ಭಾಗವಹಿಸಿದ್ದರು. ಧರ್ಮದ ವಿಷಯ ಬಂದಾಗ ನಮ್ಮ ಜನ ಒಂದೇ ಕಡೇ ನಿಲ್ಲುವ ಮೂಲಕ ಭಾರತೀಯ ಸನಾತನ, ಸಂಸ್ಕೃತಿ, ಪರಂಪರೆ ಪುನರುತ್ಥಾನವಾಗುತ್ತಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಕೆಲಸ ಮಾಡುವ ಪ್ರವೃತ್ತಿ ಜನರಲ್ಲಿ ಬಹಳ ಕಡಿಮೆಯಾಗಿದೆ. ವೈಯಕ್ತಿಕ ಏನು ಲಾಭ ಅನ್ನುವ ಮನೋಭಾವನೆ ಬಂದಿದೆ. ಆ ಮನೋಭಾವನೆ ಬಿಟ್ಟು ಎಲ್ಲರೂ ಸಾರ್ವಜನಿಕ ಕೆಲಸಕ್ಕೆ ಕೈ ಜೋಡಿಸುವುದರಿಂದ ಗ್ರಾಮದ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ. ಸುತ್ತಮುತ್ತಲಿನ ಗ್ರಾಮಗಳ ಜನರ ಮದುವೆ ಸೇರಿದಂತೆ ಇನ್ನಿತರ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಅನುಕೂಲವಾಗಬೇಕೆಂಬ ಸದುದ್ದೇಶದಿಂದ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಫೂಜ್ಯಶ್ರೀ ಚರಮೂರ್ತೀಶ್ವರ ಸ್ವಾಮೀಜಿಗಳು, ಗಂಗಯ್ಯ ಹಿರೇಮಠ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪ್ರಮುಖರಾದ ಆನಂದ ಕೊಣ್ಣೂರ, ಬಸವರಾಜ ಹುಳ್ಳೇರ, ಅಪ್ಪಣ್ಣ ಕೊಳವಿ, ಮಲ್ಲಪ್ಪ ಕಡಕಭಾಂವಿ, ಸುರೇಶ ಗುದಗನ್ನವರ, ದುಂಡಪ್ಪ ಕೊಳವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!