ನೇಸರಗಿ-18:ಪವಿತ್ರ ಕಾರವಾರ ಜಿಲ್ಲೆಯ ಜೋಯಿಡಾ ತಾಲೂಕಿನ ಬೃಹತ್ ಜಾತ್ರೆಯ ದೇವಸ್ಥಾನ ಶ್ರೀ ಚನ್ನಬಸವೇಶ್ವರ ದೇವಸ್ಥಾನ ಉಳವಿ ಜಾತ್ರೆ ಅಂದರೆ ಯಾರಿಗೆ ಗೊತ್ತಿಲ್ಲ.ಬರುವ ಶುಕ್ರವಾರದಂದು ಜರುಗುವ ಅದ್ದೂರಿ ಶ್ರೀ ಕ್ಷೇತ್ರ ಉಳವಿ ಜಾತ್ರೆಗೆ ನಾಗನೂರ ಗ್ರಾಮದ ಸದ್ಭಕ್ತರು ಪ್ರತಿವರ್ಷದ ಪದ್ಧತಿಯಂತೆ ಚಕ್ಕಡಿ ಹೂಡಿಕೊಂಡು ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಜಾತ್ರೆಗೆ ಹರ ಹರ ಮಹದೇವ್ ಜಯಘೋಷದೊಂದಿಗೆ ಪೂಜೆ ನೇರವೇರಿಸಿ ಪ್ರವಾಸ ಪ್ರಾರಂಭಿಸಿದರು..
ಈ ಸಂದರ್ಭದಲ್ಲಿ ಚಕ್ಕಡಿ ಮಾಲೀಕರಿಗೆ ಗ್ರಾಂ ಪಂ. ಅಧ್ಯಕ್ಷರಾದ ಕುಮಾರಿ ಶೋಭಾ ಪಾಟೀಲ್ ಅವರು ಹಸಿರು ಶಾಲ ಹೊಡಿಸಿ ಒಂದು ಜೋಡಿ ಹಿಡಿಹಗ್ಗ ಮತ್ತು ಸ್ಮರಣಿಕೆ ನೀಡಿ ಜಾತ್ರೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಬಸವರಾಜ ತಲ್ಲೂರ, ಅದೃಶ್ ಪತ್ತಾರ, ಶಿವು ಇಂಚಲ, ವಿನೋದ ಶಿವನಾಯ್ಕರ. ಮತ್ತು ಗ್ರಾಮದ ಜನರು ಹಾಜರಿದ್ದರು.