ಬೆಳಗಾವಿ-17:ಕುಂದಾನಗರಿ ಬೆಳಗಾವಿಯಿಂದ ಅಯೋಧ್ಯೆಗೆ ವಿಶೇಷ ಆಸ್ತಾ ರೈಲು ಸೇವೆಗೆ ಶನಿವಾರ (ಇಂದು)ಚಾಲನೆ ನೀಡಲಾಗಿದೆ. ಬೆಳಗಾವಿಯಿಂದ ಸುಮಾರು 1333 ಭಕ್ತರು ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯಲಿದ್ದಾರೆ.
ಈ ರೈಲಿನಲ್ಲಿ ಒಂದು ಬಾರಿಗೆ ಒಟ್ಟು 5000 ಪ್ರಯಾಣಿಕರು ಪ್ರಯಾಣಿಸಬಹುದು.ಈ ವಿಶೇಷ ರೈಲಿಗೆ ಇಂದು ಚಾಲನೆ ನೀಡಲಾಗಿದೆ.
ಬೆಳಗಾವಿಯಿಂದ ಅಯೋಧ್ಯೆಗೆ ರೈಲು ಆರಂಭಿಸಲು ಬೇಡಿಕೆಯಿದ್ದು, ಭಾರತೀಯ ರೈಲ್ವೇ ರಾಮ ಭಕ್ತರಿಗೆ ಶ್ರೀರಾಮನ ದರ್ಶನ ಪಡೆಯಲು ವಿಶೇಷ ರೈಲು ಆರಂಭಿಸಲು ನಿರ್ಧರಿಸಿದೆ.