ಬೆಳಗಾವಿ-17:ರಾಹುಲ್ ಶಿಂಧೆ (ಭಾ.ಆ.ಸೇ) ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಬೆಳಗಾವಿ ರವರ ಅಧ್ಯಕ್ಷತೆಯಲ್ಲಿ “ವಿಶ್ವ ಗುರು ಬಸವಣ್ಣ ಸಾಂಸ್ಕ್ರ ತಿಕ ನಾಯಕ”ರ ಭಾವಚಿತ್ರ ಅನಾವರಣ ಸಮಾರಂಭ ಬೆಳಗಾವಿಯ ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಜರುಗಿತು.
ಫೆ.17, 2024ರಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿ ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನಸೌಧ ಬೆಂಗಳೂರು ರವರ ಸುತ್ತೋಲೆಯ ಆದೇಶದನ್ವಯ ನಾವು ಇವತ್ತಿನ ದಿನ ಇಡೀ ಜಿಲ್ಲಾ ಕೇಂದ್ರ ಹಾಗೂ ಅಧೀನ ಇಲಾಖೆಗಳ ಸರ್ಕಾರಿ ಕಚೇರಿಗಳಲ್ಲಿ “ವಿಶ್ವ ಗುರು ಬಸವಣ್ಣ ಸಾಂಸ್ಕ್ರ ತಿಕ ನಾಯಕ”ರ ಭಾವಚಿತ್ರ ಅನಾವರಣಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ವಿಶ್ವಗುರುಬಸವಣ್ಣನವರು ಮಹಾತ್ಮ ಗಾಂಧಿಜೀಯ
ವರಿಗಿಂತ ಮೊದಲು “ಪ್ರಜಾಪ್ರಭುತ್ವ”ದ ಪರಿಕಲ್ಪನೆಯನ್ನು ತಮ್ಮ”ಅನುಭವ ಮಂಟಪದ” ಮೂಲಕ ಜನರಿಗೆ ತಿಳುವಳಿಕೆ ನೀಡಿದರು ಹಾಗೂ ಅವರ ಜೀವನವು ಆದರ್ಶಮಯದಿಂದ ಕೂಡಿತ್ತು, ನನಗೆ ಹೆಮ್ಮೆ ಇದೆ ಏಕೆಂದರೆ ನಾನು ಅವರ ಜನ್ಮಭೂಮಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಬಸವಣ್ಣವರು ಪ್ರತಿಪಾದಿಸಿದ ಆದರ್ಶ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಆದಿ ಆಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಕಾರ್ಯದರ್ಶಿಗಳು (ಅಭಿವೃದ್ಧಿ), ಯೋಜನಾ ನಿರ್ದೇಶಕರು, ಶಿಕ್ಷಣ ಅಧಿಕಾರಿಗಳು (ಬಿಸಿ ಊಟ ಯೋಜನೆ), ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.